alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಯಾಮಿಲಿ ಫೋಟೋದಲ್ಲಿ ಸೆರೆಯಾಗಿದೆ ‘ದೆವ್ವ’ದ ಕೈ…!

ಅಮೆರಿಕದ ವಿಸ್ಕಾನ್ಸಿಸ್ ನಗರದಲ್ಲಿ ಫ್ಯಾಮಿಲಿ ಫೋಟೋ ತೆಗೆದ ಸಂದರ್ಭದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಫೋಟೋ ತೆಗೆದ ಸಂದರ್ಭದಲ್ಲಿ ಅತೀಂದ್ರಯ ಶಕ್ತಿಯ ಕೈ ಒಂದು ಬಾಲಕನ ಕಾಲನ್ನು ಎಳೆಯುತ್ತಿರುವ ದೃಶ್ಯ ಫೋಟೋದಲ್ಲಿ ಸೆರೆಯಾಗಿದೆ. ಈ ಫೋಟೊವನ್ನ ನೋಡಿದ ನಂತರದಲ್ಲಿ ಎಲ್ಲರು ಇದು ದೆವ್ವದ ಕೈ ಅಂತ ಹೇಳ್ತಿದ್ದಾರೆ.

ಕ್ರಿಸ್ ಡೋಯಿಂಗ್ ಎಂಬ ವ್ಯಕ್ತಿ ತನ್ನ ಇಬ್ಬರು ಮಕ್ಕಳ ಜೊತೆ 2012 ರಲ್ಲಿ ತೆಗೆಸಿಕೊಂಡ ಫೋಟೊ ಇದಾಗಿದೆ. ಡ್ರಗ್ ಓವರ್ ಡೋಸ್ ನಿಂದಾಗಿ ಆಸ್ಪತ್ರೆ ಸೇರಿದ್ದ ಕ್ರಿಸ್ ವಾರಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡಿದ್ದ. ಈ ಸಮಯದಲ್ಲಿ ಆಸ್ಪತ್ರೆಗೆ ಬಂದ ಮಕ್ಕಳೊಂದಿಗೆ ಕ್ರಿಸ್ ಫೋಟೋ ತೆಗೆಸಿಕೊಂಡಿದ್ದ. ಒಂದು ವಾರದ ಬಳಿಕ ಈ ಫೋಟೋವನ್ನು ನೋಡಿದಾಗ ಅವರಿಗೆಲ್ಲಾ ಶಾಕ್ ಆಗಿದೆ.

ಮಗನ ಕಾಲನ್ನು ಆ ಕಾಣದ ಕೈ ಎಳೆಯುತ್ತಿರುವುದು ಫೋಟೋದಲ್ಲಿ ಕ್ಲಿಯರ್ ಆಗಿ ಬಂದಿದೆ. ಫೋಟೋ ತೆಗೆಯುವ ಮುನ್ನ ಅಥವಾ ನಂತರದಲ್ಲಿ ಕ್ರಿಸ್ ನ ಪುತ್ರನಾಗ್ಲಿ ಅಥವಾ ಕ್ರಿಸ್ ಆಗ್ಲಿ ಯಾವುದೇ ರೀತಿಯ ವಿಚಿತ್ರ, ಅತೀಂದ್ರಿಯ ಅನುಭವಗಳನ್ನ ಎದುರಿಸಿಲ್ಲವಂತೆ. ಆದ್ರೂ ಫೋಟೋ ನೋಡಿದ ಮಂದಿ ಒಂದು ಕ್ಷಣ ಆತಂಕಕ್ಕೊಳಗಾಗ್ತಾರೆ. ಕ್ರಿಸ್ ಇಂದಿಗೂ ಆ ಫೋಟೋ ನೋಡಿದಾಗಲೆಲ್ಲಾ ಅದು ದೆವ್ವದ ಹಸ್ತ ಅಂತಾನೇ ಹೇಳ್ತಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...