alex Certify
ಕನ್ನಡ ದುನಿಯಾ       Mobile App
       

Kannada Duniya

ಫೇರ್ ನೆಸ್ ಕ್ರೀಮ್ ಗಳನ್ನು ಬ್ಯಾನ್ ಮಾಡಿದ ಘಾನಾ

ghna5_14ಬೆಳ್ಳಗಿರುವವರು ಮಾತ್ರ ಸುಂದರವಾಗಿರುತ್ತಾರೆ ಮತ್ತು ಬುದ್ದಿವಂತರಾಗಿರುತ್ತಾರೆ ಎಂಬ ತಪ್ಪು ಕಲ್ಪನೆಯನ್ನು ಜಾಹೀರಾತುಗಳಲ್ಲಿ ಬಿಂಬಿಸುವ ಮೂಲಕ ಸೌಂದರ್ಯ ವರ್ಧಕ ಉತ್ಪನ್ನ ತಯಾರಕಾ ಕಂಪನಿಗಳು ತಮ್ಮ ಮಾರಾಟವನ್ನು ಹೆಚ್ಚಿಸಿಕೊಳ್ಳುತ್ತವೆ. ಜನ ಕೂಡಾ ಇಂತಹ ಸೌಂದರ್ಯ ವರ್ಧಕ ಸಾಮಗ್ರಿಗಳನ್ನು ಖರೀದಿಸಲು ಮುಗಿ ಬೀಳುತ್ತಾರೆ.

ಆದರೆ ಘಾನಾ ಸರ್ಕಾರ ಈಗ ಇದಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಫೇರ್ ನೆಸ್ ಕ್ರೀಮ್ ಸೇರಿದಂತೆ ಸೌಂದರ್ಯ ವರ್ಧಕ ಉತ್ಪನ್ನಗಳ ಮೇಲೆ ನಿಷೇಧ ಹೇರಲಾಗಿದೆ. ಇದರಲ್ಲಿ ಹೈಡ್ರೀಕ್ವಿನೋನ್ ಬಳಸಲಾಗುತ್ತಿದ್ದು, ಇದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎನ್ನುವ ಕಾರಣಕ್ಕಾಗಿ ಘಾನಾದ ಆರೋಗ್ಯ ಇಲಾಖೆ ಸೌಂದರ್ಯವರ್ಧಕಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿದೆ.

ಇದರಿಂದಾಗಿ ಫೇರ್ ಅಂಡ್ ಲವ್ಲಿ ಸೇರಿದಂತೆ ಆನೇಕ ಫೇರ್ ನೆಸ್ ಕ್ರೀಮ್ ಗಳ ಮಾರಾಟಕ್ಕೆ ಕಡಿವಾಣ ಬೀಳಲಿದೆ. ಸೌಂದರ್ಯವರ್ಧಕ ಉತ್ಪನ್ನಗಳನ್ನು ಮಾರಾಟ ಮಾಡುವ ಕಂಪನಿಗಳು, ಪ್ರಚಾರಕ್ಕಾಗಿ ನಿರ್ಮಿಸುತ್ತಿರುವ ಜಾಹೀರಾತುಗಳು ವರ್ಣಬೇಧ ನೀತಿಯನ್ನು ಬಿಂಬಿಸುತ್ತವೆಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬರುತ್ತಿದ್ದು, ಇದೀಗ ಘಾನಾ ಸರ್ಕಾರ ಒಂದು ಒಳ್ಳೆಯ ನಿರ್ಧಾರ ಕೈಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...