alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲು ಶಿಕ್ಷೆಯಾಗಿದ್ರೂ ತಪ್ಪಿಸಿಕೊಂಡು ತಿರುಗುತ್ತಿದ್ದಾರೆ ಈ ಅಜ್ಜಿ

ಜರ್ಮನಿ ಪೊಲೀಸರು 89 ವರ್ಷದ ವೃದ್ಧೆಯನ್ನು ಹುಡುಕುತ್ತಿದ್ದಾರೆ. ಕಾರಣ ಪ್ರಚೋದನಾತ್ಮಕ ಹೇಳಿಕೆ ನೀಡಿ, ಎರಡು ವರ್ಷ ಶಿಕ್ಷೆಗೊಳಗಾಗಿದ್ರೂ, ಇದೂವರೆಗೆ ಬಂದು ಶರಣಾಗದ ಹಿನ್ನೆಲೆಯಲ್ಲಿ , ಈಗ ಪೊಲೀಸರು ಈ ವೃದ್ಧೆಯ ಹುಡುಕಾಟದಲ್ಲಿದ್ದಾರೆ.

ಉಸ್ರುಲ್ ಹ್ಯಾವೆರ್ ಬೆಕ್ ಎಂಬ ಈ ವೃದ್ಧೆಯನ್ನು ಜರ್ಮನ್ ಮಾಧ್ಯಮವು ನಾಜಿ ಅಜ್ಜಿ ಅಂತಾ ಕರೆಯುತ್ತಿವೆ. ಯಹೂದಿಗಳ ಹತ್ಯಾಕಾಂಡದಲ್ಲಿ ಹಿಂದೆ ಈ ವೃದ್ಧೆಯನ್ನು ಶಿಕ್ಷೆಗೊಳಪಡಿಸಲಾಗಿತ್ತು.

ಹ್ಯಾವೆರ್ ಬೆಕ್ ಅವರು ತರಬೇತಿ ಸಂಸ್ಥೆಯೊಂದರ ಅಧ್ಯಕ್ಷೆಯಾಗಿದ್ರು. ಈ ವೇಳೆ ನಾಜಿ ಸಿದ್ದಾಂತಗಳನ್ನು ಪ್ರಚಾರ ಮಾಡುತ್ತಿದ್ದರಿಂದಾಗಿ 2008 ರಲ್ಲಿ ಈ ಸಂಸ್ಥೆಯನ್ನು ಮುಚ್ಚಲಾಯ್ತು.

ನಾಜಿ ಹತ್ಯಾಕಾಂಡವನ್ನು ನಿರಾಕರಿಸುತ್ತಿದ್ದ ಹ್ಯಾವೆರ್ ಬೆಕ್ ರನ್ನು ಹಲವಾರು ಬಾರಿ ವಿಚಾರಣೆಗೊಳಪಡಿಸಲಾಗಿತ್ತು. 2015 ರಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಹ್ಯಾವೆರ್ ಬೆಕ್ ರವರು “ಆಸ್ವಿಚ್” ಹತ್ಯಾಕಾಂಡ ಐತಿಹಾಸಿಕವಾಗಿ ಸಾಬೀತಾಗಿಲ್ಲ ಎಂದು ಹೇಳಿದ್ರು. ಅಲ್ಲದೆ ಮಾಧ್ಯಮಗಳಲ್ಲಿ ಸುದ್ದಿಯಾಗ್ತಿದ್ದ ಯಹೂದಿಗಳ ಹತ್ಯಾಕಾಂಡ ಇತಿಹಾಸದ ದೊಡ್ಡ ಸುಳ್ಳು ಅಂತಾ ಹೇಳಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...