alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕನ ಒಳ ಉಡುಪಿನಲ್ಲಿತ್ತು ಹಾವು..!

ಜರ್ಮನಿಯ ಫ್ರಾಂಕ್ಫರ್ಟ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಒಳ ಉಡುಪಿನೊಳಗೆ ಹಾವಿನ ಮರಿಯನ್ನು ಕೊಂಡೊಯ್ಯುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದಾರಿ ಮಧ್ಯೆ ಇಬ್ಬರು ಗಲಾಟೆ ಮಾಡುತ್ತಿದ್ದಾರೆಂಬ ವಿಷ್ಯ ಪೊಲೀಸರಿಗೆ ತಲುಪಿದೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. 19 ವರ್ಷದ ಯುವಕ ಕುಡಿದ ಮತ್ತಿನಲ್ಲಿ ಇನ್ನೊಬ್ಬನ ಜೊತೆ ಗಲಾಟೆ ಮಾಡ್ತಿದ್ದ ಎನ್ನಲಾಗಿದೆ. ಆತನ ಪ್ಯಾಂಟ್ ಉಬ್ಬಿದಂತೆ ಕಂಡು ಬಂದಿದೆ. ಯುವಕನನ್ನು ವಶಕ್ಕೆ ಪಡೆದ ಪೊಲೀಸರು ಪ್ಯಾಂಟ್ ಚೆಕ್ ಮಾಡಿದ್ದಾರೆ.

ಯುವಕನ ಪ್ಯಾಂಟ್ ಬಿಚ್ಚಿ ನೋಡಿದ ಪೊಲೀಸರು ದಂಗಾಗಿದ್ದಾರೆ. ಆತನ ಒಳ ಉಡುಪಿನಲ್ಲಿದ್ದ ಹಾವು ಪೋಲೀಸರನ್ನು ದಂಗು ಬಡಿಸಿದೆ. ತಕ್ಷಣ ಹಾವನ್ನು ವಶಕ್ಕೆ ಪಡೆದ ಪೊಲೀಸರು ಯುವಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಯುವಕನ ಒಳ ಉಡುಪಿನಲ್ಲಿ ಸಿಕ್ಕ ಹಾವು 35 ಸೆಂ.ಮೀ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಷ್ಟಕ್ಕೂ ಯುವಕ ಹಾವನ್ನು ಏಕೆ ಕೊಂಡೊಯ್ಯುತ್ತಿದ್ದ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಜರ್ಮನಿ ಸೇರಿದಂತೆ ಅನೇಕ ದೇಶಗಳಲ್ಲಿ ಕಾನೂನಿನ ಒಪ್ಪಿಗೆಯಿಲ್ಲದೆ ಪ್ರಾಣಿ ಸಾಗಣೆ ಮಾಡುವಂತಿಲ್ಲ. ಇದೇ ಕಾರಣಕ್ಕೆ ಆತ ಹಾವನ್ನು ಒಳ ಉಡುಪಿನಲ್ಲಿಟ್ಟುಕೊಂಡಿದ್ದ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...