alex Certify
ಕನ್ನಡ ದುನಿಯಾ       Mobile App
       

Kannada Duniya

ಬೇಸರ ದೂರ ಮಾಡಲು 106 ಮಂದಿ ಕೊಲೆ ಮಾಡಿದ್ಲು ನರ್ಸ್

ಬರ್ಲಿನ್ ನಲ್ಲಿ ನರ್ಸ್ ಒಬ್ಬಳು 106 ರೋಗಿಗಳನ್ನು ಕೊಲೆ ಮಾಡಿದ್ದಾಳೆ. ಬೇಸರವಾದಾಗ  ನರ್ಸ್ ರೋಗಿಗಳಿಗೆ ಮಾರಣಾಂತಿಕ ಔಷಧಿ ನೀಡ್ತಿದ್ದಳಂತೆ. ತನಿಖೆ ನಂತ್ರ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎನ್ನಲಾಗ್ತಿದೆ.

41 ವರ್ಷದ ನೀಲ್ಸ್ ಹೊಗೆಲ್ 2015ರಲ್ಲಿ ಇಬ್ಬರನ್ನು ಹತ್ಯೆ ಮಾಡಲು ಯತ್ನಿಸಿದ್ದಳಂತೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ಹತ್ಯೆಗೆ ಪ್ರಯತ್ನಿಸಿದ್ದಾಳೆಂದು ಆಕೆಯನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತಂತೆ. ನಂತ್ರ ಆಕೆ ಡೆಲ್ಮಿಹೋನ್ಹರ್ಸ್ಟ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದಳು ಎನ್ನಲಾಗಿದೆ. ಅಲ್ಲಿ ಕೆಲಸಕ್ಕೆ ಸೇರಿದ್ದ ನರ್ಸ್ 90ಕ್ಕೂ ಹೆಚ್ಚು ರೋಗಿಗಳನ್ನು ಕೊಲೆ ಮಾಡಿದ್ದಾಳೆ.

ಪೊಲೀಸರು 16 ಸಾವನ್ನು ದೃಢಪಡಿಸಿದ್ದಾರೆ. ನರ್ಸ್ ಇನ್ನೂ ಕೆಲ ಆಸ್ಪತ್ರೆಯಲ್ಲಿ ಇದೇ ಕೆಲಸ ಮಾಡಿದ್ದಾಳೆ ಎನ್ನಲಾಗ್ತಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ನರ್ಸ್ ರೋಗಿಗಳಿಗೆ ಮಾರಣಾಂತಿಕ ಔಷಧಿ ನೀಡುತ್ತಿದ್ದಳು ಎನ್ನಲಾಗಿದೆ. ಅದನ್ನು ಸೇವಿಸಿದ ನಂತ್ರ ರೋಗಿಗಳಿಗೆ ಹೃದಯಾಘಾತವಾಗ್ತಿತ್ತಂತೆ. ಇಲ್ಲವೆ ಬೇರೆ ಸಮಸ್ಯೆ ಕಾಡ್ತಿತ್ತಂತೆ. ನಂತ್ರ ಅವರ ಜೀವ ಉಳಿಸಲು ವೈದ್ಯರು ಯತ್ನಿಸುತ್ತಿದ್ದರಂತೆ. ಒಂದೇ ಕೆಲಸದಿಂದ ಬೇಸರಗೊಂಡು ನರ್ಸ್ ಹೀಗೆ ಮಾಡ್ತಿದ್ದಳಂತೆ.

ಜರ್ಮನಿಯಲ್ಲಿ ಇದೊಂದು ವಿಚಿತ್ರ ಪ್ರಕರಣವೆಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ. ಬೇರೆ ವಿಧಾನದಲ್ಲಿ ಕೂಡ ಜನರನ್ನು ಕೊಲ್ಲಲು ಯತ್ನಿಸುತ್ತಿದ್ದಳಂತೆ. ನಂತ್ರ ಅವರ ಜೀವ ಉಳಿಯಲಿ ಎಂದು ಪ್ರಾರ್ಥಿಸುತ್ತಿದ್ದಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...