alex Certify
ಕನ್ನಡ ದುನಿಯಾ       Mobile App
       

Kannada Duniya

1 ಸಾವಿರ ಕೆ.ಜಿ. ತೂಗುತ್ತೇ ಈ ಬೃಹತ್ ಬೈಕ್..!

German Man Builds The World's Heaviest Bike That Weighs A Massive 1,000 Kg!ವಿಶ್ವ ದಾಖಲೆ ಮಾಡಲು ಹಲವರು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತಾರೆ. ಇಂತದ್ದೇ ಒಂದು ಪ್ರಯತ್ನ ಈಗ ಜರ್ಮನಿ ವ್ಯಕ್ತಿಯಿಂದಾಗಿದೆ. ದಾಖಲೆಗಾಗಿ ಈತ ನಿರ್ಮಿಸಿರುವ ಬೃಹತ್ ಬೈಕ್ ಬರೋಬ್ಬರಿ 1 ಟನ್ (1000 ಕೆ.ಜಿ.) ಭಾರವಿದೆ.

ಗಿನ್ನಿಸ್ ದಾಖಲೆಗೆ ಸೇರಬೇಕೆಂಬ ಕಾರಣಕ್ಕಾಗಿ ಮಾರ್ಕ್ ದೊಸ್ಸಾ, ಮಾರ್ಚ್ ತಿಂಗಳಿನಿಂದ ಈ ಬೈಕ್ ನಿರ್ಮಾಣ ಆರಂಭಿಸಿದ್ದು, ಇದಕ್ಕಾಗಿ ಗುಜರಿ ಮತ್ತು ಕೃಷಿ ಯಂತ್ರಕ್ಕೆ ಬಳಸುವ ಕೆಲ ಉಪಕರಣಗಳನ್ನು ಬಳಸಿಕೊಂಡಿದ್ದಾನೆ.

ಈಗ ಬೈಕ್ ಸಿದ್ದವಾಗಿದ್ದು, ಸೆಪ್ಟೆಂಬರ್ 3 ರಂದು ಕನಿಷ್ಟ 457 ಮೀಟರ್ ಗಳಷ್ಟು ದೂರವನ್ನಾದರೂ ಮಾರ್ಕ್ ಕ್ರಮಿಸಬೇಕಾಗುತ್ತದೆ. ಹಾಗಾದಲ್ಲಿ ಆತ ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಲಿದ್ದಾನೆ. ಅಂದ ಹಾಗೇ ಈ ಬೈಕ್ ನಿರ್ಮಿಸಲು ಮಾರ್ಕ್ 3,07,700 ರೂಪಾಯಿಗಳನ್ನು ವ್ಯಯಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...