alex Certify
ಕನ್ನಡ ದುನಿಯಾ       Mobile App
       

Kannada Duniya

ಸಲಿಂಗಿಗಳಿಗೆ ಸಿಹಿಸುದ್ದಿ ನೀಡಿದ ಜರ್ಮನ್ ಸರ್ಕಾರ

People celebrate in front of Germany's lower house of parliament Bundestag after the delegates voted on legalising same-sex marriage, in Berlin, Germany June 30, 2017. REUTERS/Hannibal Hanschke

ಬರ್ಲಿನ್: ಸಲಿಂಗ ವಿವಾಹವನ್ನು ಜರ್ಮನ್ ಸರ್ಕಾರ ಕಾನೂನುಬದ್ಧಗೊಳಿಸಿದ್ದು, ಈ ಮೂಲಕ ಸಲಿಂಗಿಗಳಿಗೆ ಸಿಹಿ ಸುದ್ದಿಯನ್ನು ನೀಡಿದೆ.

ಮಸೂದೆಯ ಪ್ರಕಾರ ಸಲಿಂಗ ದಂಪತಿಗೆ ಮಕ್ಕಳನ್ನು ದತ್ತು ಪಡೆಯುವ ಮತ್ತು ವೈವಾಹಿಕ ಹಕ್ಕುಗಳು ಸಿಗಲಿವೆ. ಜರ್ಮನಿಯಲ್ಲಿ ಸಲಿಂಗಿಗಳಿಗೆ ನಾಗರೀಕ ಸೌಲಭ್ಯ ಪಡೆದುಕೊಳ್ಳಲು 2001 ರಿಂದಲೇ ಅವಕಾಶ ನೀಡಿದ್ದರೂ ಮದುವೆಗೆ ಸಮ್ಮತಿ ಇರಲಿಲ್ಲ.

ಜರ್ಮನ್ ಸಂಸತ್ ನಲ್ಲಿ ಮತದಾನದ ಮೂಲಕ ಮಸೂದೆಗೆ ಅನುಮೋದನೆ ನೀಡಲಾಗಿದೆ. ಈ ಮೂಲಕ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಲಾಗಿದೆ. ಶೀಘ್ರವೇ ಮಸೂದೆ ಜಾರಿಗೆ ಬರಲಿದೆ.

ಚಾನ್ಸೆಲರ್ ಏಂಜೆಲಾ ಮಾರ್ಕೇಲ್ ನೇತೃತ್ವ ಆಡಳಿತ ಕೈಗೊಂಡ ಈ ಮಹತ್ವದ ತೀರ್ಮಾನವನ್ನುಕನ್ಸರೇಟಿವ್ ಬ್ಲಾಕ್ ಮತ್ತು ಕ್ಯಾಥೋಲಿಕ್ ಚರ್ಚ್ ನಿಂದ ಟೀಕಿಸಲಾಗಿದೆ.

ಸಲಿಂಗಿಗಳ ಮದುವೆಗೆ ಕಾನೂನು ಮಾನ್ಯತೆ ನೀಡುವ ತೀರ್ಮಾನ ಹೊರ ಬೀಳುತ್ತಿದ್ದಂತೆ ಹಲವೆಡೆ ಸಂಭ್ರಮಾಚರಣೆ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...