alex Certify
ಕನ್ನಡ ದುನಿಯಾ       Mobile App
       

Kannada Duniya

ವಿಷಯುಕ್ತ ಬೀನ್ಸ್ ತಿಂದವರ ಗತಿಯೇನಾಯ್ತು ನೋಡಿ

ವಿಷಯುಕ್ತ ಬೀನ್ಸ್ ತಿಂದು ದಂಪತಿ ಪಾರ್ಶ್ವವಾಯುವಿಗೆ ತುತ್ತಾದ ಘಟನೆ ಜರ್ಮನ್ ನಲ್ಲಿ ನಡೆದಿದೆ. ಅದೃಷ್ಟವಶಾತ್ ಅವರ ಮಗ ತಿನ್ನದೇ ಇದ್ದ ಕಾರಣ ಆತ ಪಾರಾಗಿದ್ದಾನೆ. ಐದು ತಿಂಗಳುಗಳ ಕಾಲ ಈ ದಂಪತಿ ಪಾರ್ಶ್ವವಾಯುವಿನಿಂದ ಬಳಲಿದ್ದಾರೆ.

ವರದಿಯ ಪ್ರಕಾರ ಜರ್ಮನಿಯಲ್ಲಿ ಇಂಥ 10 ಪ್ರಕರಣಗಳು ಪ್ರತಿ ವರ್ಷ ದಾಖಲಾಗುತ್ತವೆ. ಪಾರ್ಶ್ವವಾಯುವಿಗೆ ಒಳಗಾದ 47 ವರ್ಷದ ಮಹಿಳೆ ತಲೆ ತಿರುಗುವಿಕೆ, ದ್ವಿದೃಷ್ಟಿ, ಕಣ್ಣುರೆಪ್ಪೆ ಇಳಿ ಬೀಳುವಿಕೆ ಸಮಸ್ಯೆಯಿಂದ ತೊಂದರೆ ಅನುಭವಿಸಿದರು ಮತ್ತು ಆಸ್ಪತ್ರೆಗೆ ಹೋದಾಗ ಮಾತನಾಡಲೂ ಸಹ ಹೆಣಗಾಡಿದ್ದಾರೆ.

ಆಕೆಯ ಪತಿಯೂ ಇಂಥದ್ದೇ ಸಮಸ್ಯೆಯಿಂದ ಬಳಲಿದ್ದು 8 ತಿಂಗಳ ಚಿಕಿತ್ಸೆಯ ಬಳಿಕ ಮನೆಗೆ ಮರಳಿದ್ದಾರೆ. ವೈದ್ಯರು ಇದು ವಿಷಯುಕ್ತ ಬೀನ್ಸ್ ನಿಂದಾಗಿಯೇ ಆಗಿದ್ದು ಎಂಬುದನ್ನು ದೃಢಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...