alex Certify
ಕನ್ನಡ ದುನಿಯಾ       Mobile App
       

Kannada Duniya

65 ಲಕ್ಷ ಮೌಲ್ಯದ ಆಭರಣವನ್ನು ಕಸಕ್ಕೆ ಎಸೆದಿದ್ಲು ಮಹಿಳೆ, ಮುಂದೆ?

ಅಮೆರಿಕದ ಜಾರ್ಜಿಯಾದಲ್ಲಿ ಮಹಿಳೆಯೊಬ್ಬಳು ಆಕಸ್ಮಿಕವಾಗಿ ಸುಮಾರು 65 ಲಕ್ಷ ರೂಪಾಯಿ ಮೌಲ್ಯದ ಆಭರಣವನ್ನು ಕಸಕ್ಕೆ ಎಸೆದುಬಿಟ್ಟಿದ್ಲು. ಆಭರಣ ಕಸದ ರಾಶಿ ಸೇರಿರೋದು ಅರಿವಿಗೆ ಬರುತ್ತಿದ್ದಂತೆ ಸಹಾಯಕ್ಕಾಗಿ ಪೊಲೀಸರಿಗೆ ಕರೆ ಮಾಡಿದ್ದಾಳೆ.

ಅವಳ ಅದೃಷ್ಟ ನೆಟ್ಟಗಿತ್ತು. 10 ಟನ್ ಕಸದ ರಾಶಿಯಲ್ಲಿ ಸತತ ಮೂರು ಗಂಟೆಗಳ ಕಾಲ ಹುಡುಕಾಟ ನಡೆಸಿದ ಪೊಲೀಸರು ಕೊನೆಗೂ ವಜ್ರದ ಆಭರಣವನ್ನು ಪತ್ತೆ ಮಾಡಿದ್ದಾರೆ. ಕಪ್ಪನೆಯ ಕವರ್ ಒಂದರಲ್ಲಿ ಮಹಿಳೆಯ 2 ಉಂಗುರ ಹಾಗೂ ಒಂದು ಬ್ರೆಸ್ಲೆಟ್ ಸಿಕ್ಕಿದೆ.

ಆಭರಣ ಕಪ್ಪು ಬಣ್ಣದ ಕವರ್ ನಲ್ಲಿದೆ ಅನ್ನೋದನ್ನು ಬಿಟ್ರೆ ಮತ್ಯಾವ ಸುಳಿವು ಕೂಡ ಪೊಲೀಸರಿಗೆ ಇರಲಿಲ್ಲ. ಒಟ್ಟು ಐವರು ಸಿಬ್ಬಂದಿ ಛಲ ಬಿಡದೇ ಅದನ್ನು ಹುಡುಕಿದ್ದಾರೆ. ಪ್ರತಿನಿತ್ಯ ಅಲ್ಲಿ 300 ಟನ್ ಕಸ ಸಂಗ್ರಹವಾಗುತ್ತದೆ. ಹಾಗಾಗಿ ಕಳೆದಿದ್ದ ಆಭರಣ ಹುಡುಕೋದು ಸುಲಭದ ಕೆಲಸವಾಗಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...