alex Certify
ಕನ್ನಡ ದುನಿಯಾ       Mobile App
       

Kannada Duniya

ಸಹ ಪ್ರಯಾಣಿಕರಿಗೆ ಹೆಡ್ ಫೋನ್ ಕೊಡ್ತಾರೆ ಹಾಲಿವುಡ್ ದಂಪತಿ, ಕಾರಣ…?

ವಿಮಾನದಲ್ಲಿ ಪ್ರಯಾಣಿಸುವಾಗ ಪುಟ್ಟ ಮಕ್ಕಳು ಅಳೋದು, ರಚ್ಚೆ ಹಿಡಿಯೋದು ಸಾಮಾನ್ಯ. ಅದನ್ನು ಕೇಳಿ ಸಹ ಪ್ರಯಾಣಿಕರು ಕಿರಿಕಿರಿ ಅನುಭವಿಸ್ತಾರೆ, ಮುಖ ಕಿವುಚ್ತಾರೆ. ಆಗೆಲ್ಲಾ ಹೇಗಪ್ಪಾ ಇವರನ್ನು ಸುಮ್ಮನಿರಿಸೋದು ಅಂತಾ ಹೆತ್ತವರು ಪರಿತಪಿಸ್ತಾರೆ.

ಆದ್ರೆ ಹಾಲಿವುಡ್ ನಟ ಜಾರ್ಜ್ ಕ್ಲೂನಿ ಹಾಗೂ ಅಮಲ್ ದಂಪತಿ ಇದಕ್ಕಾಗಿ ಹೊಸ ಪ್ಲಾನ್ ಮಾಡಿದ್ದಾರೆ. ಈ ದಂಪತಿಗೆ 6 ತಿಂಗಳ ಅವಳಿ ಮಕ್ಕಳಿದ್ದಾರೆ. ವಿಮಾನ ಪ್ರಯಾಣದ ಸಂದರ್ಭದಲ್ಲಿ ಮಕ್ಕಳು ಅಳಲಾರಂಭಿಸಿದ್ರೆ ಅಕ್ಕಪಕ್ಕದಲ್ಲಿರೋ ಸಹ ಪ್ರಯಾಣಿಕರಿಗೆ ಅಳು ಕೇಳಿಸದಂತಹ ಹೆಡ್ ಫೋನ್ ಅನ್ನು ಕ್ಲೂನಿ ಹಾಗೂ ಅಮಲ್ ಕೊಡ್ತಾರಂತೆ.

ಇದೇ ರೀತಿ ಬ್ರಿಟನ್ ಗೆ ಹೊರಟಿದ್ದ ಪ್ರಯಾಣಿಕರೊಬ್ಬರಿಗೆ ಕ್ಲೂನಿ ಪುಟ್ಟದೊಂದು ನೋಟ್ ಬರೆದಿರೋ ಹೆಡ್ ಫೋನ್ ಕೊಟ್ಟಿದ್ದಾರೆ. 56 ವರ್ಷದ ಕ್ಲೂನಿ ಹಾಗೂ 39 ವರ್ಷದ ಅಮಲ್ ದಂಪತಿಗೆ ಎಲ್ಲಾ ಮತ್ತು ಅಲೆಕ್ಸಾಂಡರ್ ಎಂಬ ಅವಳಿ ಮಕ್ಕಳಿದ್ದಾರೆ. ಜೂನ್ ನಲ್ಲಿ ಅಮಲ್ ಗೆ ಹೆರಿಗೆಯಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...