alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆರಿಕಾದಲ್ಲಿ ಇತಿಹಾಸ ಬರೆದ ಭಾರತೀಯ ಮಹಿಳೆ

ವಿಶ್ವದ ಕಾರ್ಪೋರೇಟ್ ಜಗತ್ತಿನಲ್ಲಿ ಇನ್ನೊಬ್ಬ ಭಾರತೀಯ ಮಹಿಳೆ ಇತಿಹಾಸ ಬರೆಯಲಿದ್ದಾಳೆ. ದಿವ್ಯಾ ಸೂರ್ಯದೇವಡಾ ವಿಶ್ವದ ದೊಡ್ಡ ಆಟೋ ಕಂಪನಿಯ ಸಿಇಓ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಜನರಲ್ ಮೋಟಾರ್ಸ್ ಭಾರತೀಯ ಕಾರ್ಪೋರೇಟ್ ದಿವ್ಯಾರಿಗೆ ಸಿಇಒ ಜವಾಬ್ದಾರಿ ನೀಡಿದೆ.

ಸದ್ಯ ದಿವ್ಯಾ ಕಾರ್ಪೋರೇಟ್ ಫೈನಾನ್ಸ್ ಕಂಪನಿಯ ಅಧ್ಯಕ್ಷರಾಗಿ ಕೆಲಸ ಮಾಡ್ತಿದ್ದಾರೆ. ಸೆಪ್ಟೆಂಬರ್ 1,2018 ರಂದು ದಿವ್ಯಾ ಸಿಇಒ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಜನರಲ್ ಮೋಟಾರ್ಸ್ ಅಮೆರಿಕಾದ ನಂಬರ್ 1 ಆಟೋ ನಿರ್ಮಾಣ ಕಂಪನಿಯಾಗಿದೆ.

39 ವರ್ಷದ ದಿವ್ಯಾ ಜಿಎಂ ಕಂಪನಿಯ ಅನೇಕ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದಾರೆ. ದಿವ್ಯಾ ಕಂಪನಿಗೆ ಸಾಕಷ್ಟು ಲಾಭ ತಂದುಕೊಟ್ಟಿದ್ದಾರೆ. ಕಳೆದ 13 ವರ್ಷಗಳಿಂದ ದಿವ್ಯಾ ಈ ಕಂಪನಿಗಾಗಿ ಕೆಲಸ ಮಾಡ್ತಿದ್ದಾರೆ. ಕಂಪನಿಯಲ್ಲಿ ದಿವ್ಯಾ ಸಾಕಷ್ಟು ಸುಧಾರಣೆ ತಂದಿದ್ದಾರೆ. ಭಾರತದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಿ ದಿವ್ಯಾ ಅಮೆರಿಕಾಕ್ಕೆ ತೆರಳಿದ್ದರು. ಮೊದಲು ಯುಬಿಎಸ್ ನಲ್ಲಿ ನೌಕರಿ ಮಾಡಿದ ದಿವ್ಯಾ ನಂತ್ರ ಜಿಎಂನಲ್ಲಿ ಕೆಲಸ ಶುರು ಮಾಡಿದ್ದರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...