alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿ ನಡೀತು ಸಮಲಿಂಗಿ ಮದುವೆ

ಆಸ್ಟ್ರೇಲಿಯಾದಲ್ಲಿ ಸಮಲಿಂಗ ಮದುವೆಗೆ ಕಾನೂನು ಮಾನ್ಯತೆ ಸಿಕ್ಕಿದೆ. ಕೆಲವೇ ದಿನಗಳ ಹಿಂದೆ ಆಸ್ಟ್ರೇಲಿಯಾ ಸಂಸತ್ ನಲ್ಲಿ ಸಮಲಿಂಗ ಮದುವೆ ಕಾನೂನಿಗೆ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಸಿಹಿ ಹಂಚಿ ಖುಷಿ ವ್ಯಕ್ತಪಡಿಸಿದ್ದ ಸಮಲಿಂಗಿಗಳು ಈಗ ಮದುವೆ ತಯಾರಿಯಲ್ಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಇದೇ ಮೊದಲ ಬಾರಿ ಸಮಲಿಂಗಿಗಳ ಮದುವೆಯೊಂದು ನೆರವೇರಿದೆ.

ಇಬ್ಬರು ಆಸ್ಟ್ರೇಲಿಯಾ ಮಹಿಳೆಯರು ಮದುವೆಯಾಗಿದ್ದಾರೆ. ಫೇಸ್ಬುಕ್ ನಲ್ಲಿ ಆಸ್ಟ್ರೇಲಿಯಾ ನವ ಜೋಡಿಗೆ ಶುಭಕೋರಿದೆ. ಆಮಿ ಲೋಕರ್ ಹಾಗೂ ಲಾರೆನ್ ಪ್ರೈಸ್ ಮದುವೆ ಬಂಧನದಲ್ಲಿ ಬಂಧಿಯಾಗಿದ್ದಾರೆ. ಇದ್ರೊಂದಿಗೆ ದೇಶದಲ್ಲಿ ಮೊದಲ ಬಾರಿ ಕಾನೂನಿನ ಮೂಲಕ ಮದುವೆಯಾದ ಸಮಲಿಂಗ ಜೋಡಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಅನೇಕ ವರ್ಷಗಳಿಂದ ಸಮಲಿಂಗ ಮದುವೆಗೆ ಕಾನೂನಿನಲ್ಲಿ ಒಪ್ಪಿಗೆ ನೀಡಬೇಕೆಂಬ ಕೂಗು ಕೇಳಿ ಬರುತ್ತಿತ್ತು. ವರ್ಷಾರಂಭದಲ್ಲಿ ನಡೆದ ಸಮೀಕ್ಷೆಯೊಂದು ಸರ್ಕಾರ ಕೂಡ ಈ ಬಗ್ಗೆ ಗಂಭೀರವಾಗಿ ಚಿಂತಿಸುವಂತೆ ಮಾಡಿತ್ತು. ಸಮೀಕ್ಷೆಯಲ್ಲಿ ಶೇಕಡಾ 61ಕ್ಕೂ ಹೆಚ್ಚು ಮಂದಿ ಸಮಲಿಂಗ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...