alex Certify
ಕನ್ನಡ ದುನಿಯಾ       Mobile App
       

Kannada Duniya

1,200 ಕೆ.ಜಿ. ಗೋಧಿಗೆ ಅತ್ಯಾಚಾರದ ಕೇಸ್ ಇತ್ಯರ್ಥ

WHEATಪಂಚಾಯಿತಿ ಮುಖಂಡರು ನೀಡುವ ಕೆಲ ತೀರ್ಪುಗಳು ಎಷ್ಟು ಅಮಾನವೀಯಕರವಾಗಿರುತ್ತವೆಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. 14 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಕಾಮುಕರಿಂದ ಸಾಮೂಹಿಕ ಅತ್ಯಾಚಾರಕ್ಕೀಡಾಗಿದ್ದು, ಸಂತ್ರಸ್ಥೆಯ ಕುಟುಂಬಕ್ಕೆ ಆರೋಪಿಗಳಿಂದ ಪರಿಹಾರವಾಗಿ 1,200 ಕೆ.ಜಿ. ಗೋಧಿ ಕೊಡಿಸಿ ಪ್ರಕರಣವನ್ನು ಇತ್ಯರ್ಥ ಮಾಡಲಾದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಉಮ್ಮರ್ ಕೋಟ್ ಜಿಲ್ಲೆಯ ಗುಲಾಮ್ ನಬಿ ಶಾ ಏರಿಯಾದಲ್ಲಿ ಈ ಪ್ರಕರಣ ನಡೆದಿದ್ದು, ಅಪ್ರಾಪ್ತ ಬಾಲಕಿ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಆಕೆಯ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ವೇಳೆ ತಾವೇ ಬಗೆಹರಿಸಿಕೊಳ್ಳುವುದಾಗಿ ಸಮುದಾಯದ ಮುಖಂಡರು ತಿಳಿಸಿದ್ದರು.

ಆದರಂತೆ ಅಲ್ಲಿ ಚಾಲ್ತಿಯಲ್ಲಿರುವ ‘ಜಿರ್ಗಾ’ ಪಂಚಾಯಿತಿ ಮುಖಂಡರು ಸಭೆ ನಡೆಸಿ, ಆರೋಪಿಗಳು ಸಂತ್ರಸ್ಥ ಬಾಲಕಿ ಕುಟುಂಬಕ್ಕೆ 1,200 ಕೆ.ಜಿ. ಗೋಧಿ ನೀಡಬೇಕೆಂದು ಆದೇಶಿಸಿ ಪ್ರಕರಣ ಇತ್ಯರ್ಥಗೊಳಿಸಿದ್ದರು. ಇದನ್ನು ಪ್ರತಿಭಟಿಸಿ ಬಾಲಕಿಯ ಪೋಷಕರು ಪುನಃ ಠಾಣೆಯ ಮೆಟ್ಟಿಲೇರುವುದಾಗಿ ಹೇಳಿದ ವೇಳೆ ಗ್ರಾಮದಿಂದಲೇ ಅವರನ್ನು ಹೊರ ಹಾಕುವುದಾಗಿ ಬೆದರಿಸಲಾಯಿತು. ಈ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಉನ್ನತ ಪೊಲೀಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಅತ್ಯಾಚಾರ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...