alex Certify
ಕನ್ನಡ ದುನಿಯಾ       Mobile App
       

Kannada Duniya

ಚರ್ಚೆಯಲ್ಲಿದೆ ಒಸಾಮಾ ಬಿನ್ ಲಾಡೆನ್ ಮಗನ ಮದುವೆ

ಭಯೋತ್ಪಾದನ ಸಂಘಟನೆ ಅಲ್ –ಖೈದಾದ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್ ಮಗ ಹಮ್ಜಾ ಬಿನ್ ಲಾಡೆನ್ ಮದುವೆಯಾಗಿದ್ದಾನೆ. ಹಮ್ಜಾ ಬಿನ್ ಲಾಡೆನ್ ಮದುವೆ ಈಗ ಚರ್ಚೆಯ ವಿಷ್ಯವಾಗಿದೆ.

ಹಮ್ಜಾ ಬಿನ್ ಲಾಡೆನ್ ಮದುವೆಯಾಗಿದ್ದು ಮತ್ಯಾರನ್ನೂ ಅಲ್ಲ 9/11 ದಾಳಿಯಲ್ಲಿ ಪ್ಲೇನ್ ಹೈಜಾಕ್ ಮಾಡಿದ್ದ ಮೊಹಮ್ಮದ್ ಅಟ್ಟಾ ಮಗಳನ್ನು. ಒಸಾಮಾನ ಸಹೋದರರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹಮ್ಜಾ ಬಿನ್ ಲಾಡೆನ್ ಕೂಡ ಅಲ್ – ಖೈದಾ ಸದಸ್ಯನಾಗಿದ್ದಾನೆ.

ಅಲ್-ಖೈದಾದಲ್ಲಿ ಉನ್ನತ ಸ್ಥಾನದಲ್ಲಿರುವ ಹಮ್ಜಾ, ತಂದೆ ಸಾವಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾನಂತೆ. ಮೇ. 2, 2011ರಂದು ಅಮೆರಿಕಾ ಒಸಾಮಾ ಬಿನ್ ಲಾಡೆನ್ ನನ್ನು ಹತ್ಯೆಗೈದಿತ್ತು. ಸೇನಾಪಡೆ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿತ್ತು.

ಬಾಲ್ಯದಲ್ಲಿಯೇ ಹಮ್ಜಾ ಅಲ್-ಖೈದಾದ ಭವಿಷ್ಯ ಎನ್ನಲಾಗ್ತಾಯಿತ್ತು. 10 ವರ್ಷದಲ್ಲಿಯೇ ಹಮ್ಜಾಗೆ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗಿತ್ತು. ಹಮ್ಜಾ ಪತ್ನಿ ಈಜಿಪ್ಟ್ ನಾಗರಿಕಳಾಗಿದ್ದಾಳೆ. ಸದ್ಯ ಹಮ್ಜಾ ಅಪಘಾನಿಸ್ತಾನದಲ್ಲಿದ್ದಾನೆ ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...