alex Certify
ಕನ್ನಡ ದುನಿಯಾ       Mobile App
       

Kannada Duniya

ಜಪಾನ್ ಪ್ರಧಾನಿಗೆ ಶೂ ನಲ್ಲಿ ಊಟ ನೀಡಿದ ಇಸ್ರೇಲ್…!

ಜಪಾನ್ ಪ್ರಧಾನಿ ಶಿಂಝೋ ಅಬೆ ಇಸ್ರೇಲ್ ಪ್ರವಾಸದಲ್ಲಿದ್ದಾಗ ಅವರಿಗೆ ಶೂನಲ್ಲಿ ಊಟ ಬಡಿಸಿದ ವಿಲಕ್ಷಣ ಘಟನೆ ನಡೆದಿದೆ.

ಮೇ 2 ರಂದು ನಡೆದ ಮಹತ್ವದ ಸಭೆಯ ಬಳಿಕ ಜಪಾನ್ ಪ್ರಧಾನಿ ಶಿಂಝೋ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಕುಟುಂಬ ಊಟಕ್ಕೆ ಕುಳಿತಿದ್ದರು. ಈ ವೇಳೆ ಅವರಿಗೆ ಚಾಕಲೇಟ್ ಗಳನ್ನು ಶೂ ನಲ್ಲಿ ಹಾಕಿ ನೀಡಲಾಗಿದ್ದು, ಇದನ್ನು ಕಂಡ ಜಪಾನ್ ಮಾಧ್ಯಮದವರು ಹಾಗೂ ರಾಜತಾಂತ್ರಿಕರಿಗೆ ಶಾಕ್ ಆಗಿತ್ತು.

ಸೆಲೆಬ್ರಿಟಿ ಶೆಫ್ ಸೆಗೆವ್ ಮೊಶೆ ಎಂಬುವವರು ತಯಾರಿಸಿದ ಅಡುಗೆಯನ್ನು ಕಪ್ಪು ಬಣ್ಣದ ಶೂ ನಲ್ಲಿ ಇಡಲಾಗಿತ್ತು. ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸೆಗೆವ್ ಅವರ ವಕ್ತಾರರು ಈ ಬಗ್ಗೆ ಹೇಳಿಕೆ ನೀಡಿದ್ದು, ಇದೊಂದು ಕಲಾತ್ಮಕ ಶೈಲಿಯಾಗಿದೆ. ಇದನ್ನು ಅಂತಾರಾಷ್ಟ್ರೀಯ ಕಲಾವಿದ ಟಾಮ್ ಡಿಕ್ಸೊನ್ ತಯಾರಿಸಿದ್ದು. ಇದು ನಿಜವಾದ ಶೂ ಅಲ್ಲ. ಬದಲಾಗಿ ಉತ್ತಮ ಗುಣಮಟ್ಟದ ಲೋಹದಿಂದ ತಯಾರಿಸಲಾಗಿರುವ ಪಾತ್ರೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...