alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳೆಯ, ಗೆಳತಿ ಜೊತೆಗಿದ್ದರೆ ಅಷ್ಟೇ..!

friend 16 a

ಇಸ್ಲಾಮಾಬಾದ್: ಶಾಲಾ, ಕಾಲೇಜ್ ಎಂದ ಮೇಲೆ ಸ್ನೇಹಿತರು ಇದ್ದೇ ಇರುತ್ತಾರೆ. ಹುಡುಗರಿಗೆ ಹುಡುಗರು, ಹುಡುಗಿಯರಿಗೆ ಹುಡುಗಿಯರು ಮಾತ್ರ ಫ್ರೆಂಡ್ಸ್ ಆಗಿರಬೇಕೆಂದಿಲ್ಲ. ಹೆಣ್ಣುಮಕ್ಕಳು ಹುಡುಗರೊಂದಿಗೂ ಗೆಳೆತನ ಹೊಂದಿರುತ್ತಾರೆ. ಅದರಲ್ಲಿಯೂ ಶಾಲಾ ಕಾಲೇಜ್ ಗಳಲ್ಲಿ ಅದೆಲ್ಲಾ ಕಾಮನ್.

ಆದರೆ, ಪಾಕಿಸ್ತಾನದಲ್ಲಿ ಯುವಕ, ಯುವತಿ ಕ್ಯಾಂಪಸ್ ನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವಂತಿಲ್ಲ. ಸಂಪ್ರದಾಯದ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ನಿಯಂತ್ರಿಸುವ ಇಲ್ಲಿನ ಕೆಲವು ಪ್ರಾಂತ್ಯಗಳಲ್ಲಿ ಈ ಪರಿಸ್ಥಿತಿ ಇದೆ ಎಂದು ಹೇಳಲಾಗಿದೆ. ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲಿರುವ ಪಖ್ತುಂಖ್ವಾ ಎಂಬಲ್ಲಿರುವ ಸ್ವಾತ್ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಯುವಕ, ಯುವತಿಯರು ಜೊತೆಯಾಗಿ ಕಾಣಿಸಿಕೊಂಡರೆ, ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.

ಈ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಯುವಕ, ಯುವತಿಯರನ್ನು ಸಸ್ಪೆಂಡ್ ಮಾಡಲು ವಿವಿ ತೀರ್ಮಾನ ಕೈಗೊಂಡಿದೆ. ವಿವಿಯ ಈ ನಿರ್ಧಾರಕ್ಕೆ ಹೆಣ್ಣುಮಕ್ಕಳ ಪರ ಹೋರಾಟಗಾರ್ತಿ ಮಲಾಲ ಯೂಸಫ್ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...