alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಸಳೆ, ಕಾಳಿಂಗ ಸರ್ಪದಂತ ಜೀವಿಗಳ ಜೊತೆ ವಾಸವಾಗಿದ್ದಾನೆ ಈ ಮನುಷ್ಯ…!

ಪ್ರಪಂಚದಲ್ಲಿ ಚಿತ್ರವಿಚಿತ್ರ ಜನರಿದ್ದಾರೆ. ತಮ್ಮ ವಿಚಿತ್ರ ಹವ್ಯಾಸಗಳಿಂದ ಆಗಾಗ ಚರ್ಚೆಯಾಗ್ತಿರುತ್ತಾರೆ. ಫ್ರಾನ್ಸ್ ವ್ಯಕ್ತಿಯೊಬ್ಬನ ಹವ್ಯಾಸ ಕೂಡ ಹುಬ್ಬೇರಿಸುವಂತೆ ಮಾಡುತ್ತದೆ. ಈತನ ಮನೆಯಲ್ಲಿ ಬೆಕ್ಕು, ನಾಯಿಯಲ್ಲ, ಹಾವು, ಮೊಸಳೆ ಸೇರಿದಂತೆ ಸರಿಸೃಪಗಳನ್ನು ಕಾಣಬಹುದಾಗಿದೆ.

ಒಂದಲ್ಲ ಎರಡಲ್ಲ 400 ಕ್ಕೂ ಹೆಚ್ಚು ಅಪಾಯಕಾರಿ ಜೀವಿಗಳು ಈತನ ಮನೆಯಲ್ಲಿವೆ. ಹಾವು, ಮೊಸಳೆ ಕಂಡ್ರೆ ದೂರ ಓಡುವವರ ಸಂಖ್ಯೆಯೇ ಹೆಚ್ಚು. ಆದ್ರೆ ಫ್ರಾನ್ಸ್ ನ ಫಿಲಿಪ್ ಗಿಲೆಟ್ ಗೆ ಇವುಗಳೆಂದ್ರೆ ಪ್ರಾಣ. ಫಿಲಿಪ್ ಗಿಲೆಟ್ ಪ್ರತಿದಿನ ಮೊಸಳೆಗಳಿಗೆ ನಾವು ಸಾಕು ನಾಯಿಗೆ ಆಹಾರ ತಿನ್ನಿಸಿದಂತೆ ಮಾಂಸ ತಿನ್ನಿಸುತ್ತಾನೆ.

ದೊಡ್ಡ ಗಾತ್ರದ ಆಮೆ, ಹಾವು, ಮೊಸಳೆಗಳೇ ಈತನ ಪ್ರಪಂಚ. ಜನಸಾಮಾನ್ಯರಿಗೆ 7 ಅಡಿ ಉದ್ದದ ಮೊಸಳೆ ನೋಡಲೇ ಭಯವಾಗುತ್ತದೆ. ಆದ್ರೆ ಗಿಲೆಟ್ ಇದ್ರ ಪಕ್ಕದಲ್ಲಿ ಸುಖ ನಿದ್ರೆ ಮಾಡ್ತಾನೆ. 67 ವರ್ಷದ ಗಿಲೆಟ್ 2 ದಶಕಗಳಿಂದ ಈ ಅಪಾಯಕಾರಿ ಜೀವಿಗಳ ಜೊತೆ ವಾಸವಾಗಿದ್ದಾನೆ. ಜನರು ಈ ಪ್ರಾಣಿಗಳನ್ನು ಯಾಕೆ ದ್ವೇಷಿಸುತ್ತಾರೆಂದು ನನಗೆ ಅರ್ಥವಾಗುವುದಿಲ್ಲ. ಅವ್ರನ್ನು ನಾವು ಅರ್ಥ ಮಾಡಿಕೊಂಡ್ರೆ ಭಯ ದೂರವಾಗುತ್ತದೆ. ಅವ್ರ ಹೆಸರು ಕೂಗಿ, ಆಹಾರ ನೀಡಿ ನೋಡಿ. ಅವು ನಿಮ್ಮನ್ನು ಎಷ್ಟು ಪ್ರೀತಿ ಮಾಡುತ್ತವೆ ಎಂಬುದು ಗೊತ್ತಾಗುತ್ತದೆ ಎನ್ನುತ್ತಾರೆ ಗಿಲೆಟ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...