alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೊಸಳೆ ಬಾಯಿಗೆ ಬಿದ್ಲು

thailand-crocodile

ಥೈಲ್ಯಾಂಡ್ ನಲ್ಲಿ ಸೆಲ್ಫಿ ಹುಚ್ಚಿನಲ್ಲಿ ಮೈಮರೆತಿದ್ದ ಮಹಿಳೆಯೊಬ್ಳು ಮೊಸಳೆಗೆ ಆಹಾರವಾಗಿಬಿಡ್ತಾ ಇದ್ಲು. ಆದ್ರೆ ಅದೃಷ್ಟವಶಾತ್ ಪಾರಾಗಿದ್ದಾಳೆ.

41 ವರ್ಷದ ಫ್ರಾನ್ಸ್ ಮಹಿಳೆ ಮುರಿಯಲ್ ಬೆನೆಟುಲಿಯರ್ ಎಂಬಾಕೆ ಥೈಲ್ಯಾಂಡ್ ನಲ್ಲಿರುವ Khao Yai ನ್ಯಾಶನಲ್ ಪಾರ್ಕ್ ಗೆ ಬಂದಿದ್ಲು. ಮೊಸಳೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅದರ ಸಮೀಪಕ್ಕೆ ಹೋಗಿದ್ದಾಳೆ.

ಮೊಸಳೆಯ ಹತ್ತಿರದಲ್ಲಿ ಕುಳಿತು ಫೋಟೋ ತೆಗೆದುಕೊಂಡಿದ್ದಾಳೆ. ಇದ್ದಕ್ಕಿದ್ದಂತೆ ಮೊಸಳೆ ಆಕೆಯ ಎಡಗಾಲನ್ನು ಕಚ್ಚಿ ಎಳೆದಿದೆ. ಮೊಸಳೆ ದಾಳಿಯಿಂದ ಗಾಬರಿಯಾದ ಮಹಿಳೆ ಚೀರಿಕೊಂಡ್ಲು.

ಕೂಡಲೇ ಧಾವಿಸಿ ಬಂದ ಪಾರ್ಕ್ ಸಿಬ್ಬಂದಿ ಮಹಿಳೆಯನ್ನು ಮೊಸಳೆಯಿಂದ ರಕ್ಷಣೆ ಮಾಡಿದ್ದಾರೆ. ಆದ್ರೆ ಮೊಸಳೆ ಕಚ್ಚಿದ್ರಿಂದ ಮುರಿಯಲ್ ತೀವ್ರವಾಗಿ ಗಾಯಗೊಂಡಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುರಿಯಲ್ ತನ್ನ ಪತಿ ಜೊತೆಗೆ ಥೈಲ್ಯಾಂಡ್ ಪ್ರವಾಸ ಕೈಗೊಂಡಿದ್ಲು. ಇನ್ನು ಮೊಸಳೆ ಪಾರ್ಕ್ ನಲ್ಲಿ ಎಲ್ಲಾ ಕಡೆ ಪ್ರವಾಸಿಗರನ್ನು ಎಚ್ಚರಿಸಲು ಫಲಕಗಳನ್ನು ತೂಗುಹಾಕಲಾಗಿದೆ. ಆದ್ರೂ ಕೆಲವರು ಮೊಸಳೆ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಳ್ತಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...