alex Certify
ಕನ್ನಡ ದುನಿಯಾ       Mobile App
       

Kannada Duniya

ಕೂದಲೆಳೆ ಅಂತರದಲ್ಲಿ ಚಿರತೆ ದಾಳಿಯಿಂದ ಪಾರಾಗಿದೆ ಈ ಕುಟುಂಬ

ತಮ್ಮ ಮಗುವಿನೊಂದಿಗೆ ವನ್ಯಜೀವಿ ಉದ್ಯಾನವನಕ್ಕೆ ಭೇಟಿ ಕೊಟ್ಟ ಕುಟುಂಬವನ್ನು, ಚಿರತೆಗಳು ಓಡಿಸಿಕೊಂಡು ಬಂದ ಘಟನೆ ನೆದರ್ಲ್ಯಾಂಡ್ ನ ಪಾರ್ಕ್ ಒಂದರಲ್ಲಿ ನಡೆದಿದೆ. ಯೂಟ್ಯೂಬ್ ನಲ್ಲಿ ಈ ವಿಡಿಯೋವನ್ನು ಅಪ್ ಲೋಡ್ ಮಾಡಲಾಗಿದ್ದು, ಮಿಲಿಯನ್ ಗಟ್ಟಲೆ ಜನರು ವೀಕ್ಷಿಸಿದ್ದಾರೆ.

ಫ್ರಾನ್ಸ್ ನ ಈ ದಂಪತಿ ತಮ್ಮ ಮಗುವನ್ನು ಎತ್ತಿಕೊಂಡು ಬೀಕ್ಸೆ ಬರ್ಗೆನ್ ಸಫಾರಿ ಪಾರ್ಕ್ ಗೆ ಹೋಗಿದ್ರು. ಸುರಕ್ಷತೆಯ ಎಚ್ಚರಿಕೆಗಳಿದ್ರೂ, ಇವರಿಬ್ಬರು ಕಾರಿನಿಂದ ಇಳಿದು ಪಾರ್ಕ್ ಸುತ್ತುತಿದ್ರು. ಇವರ ಕೈಯಲ್ಲಿ ಮಗು ಇರುವುದನ್ನು ನೋಡಿದ ಚಿರತೆ ಈ ದಂಪತಿಯ ಬೆನ್ನು ಹತ್ತಿತು. ವೇಗವಾಗಿ ಓಡಿದ ದಂಪತಿ ತಮ್ಮ ಕಾರು ಹತ್ತಿ ಕುಳಿತು ಪ್ರಾಣ ಉಳಿಸಿಕೊಂಡ್ರು.

ಕೂದಲೆಳೆಯ ಅಂತರದಲ್ಲಿ ಬದುಕುಳಿದ ಈ ದಂಪತಿ, ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿದ್ರು. ಉದ್ಯಾನವನದಲ್ಲಿ ಸ್ಪಷ್ಟ ನಿರ್ದೇಶನಗಳಿದ್ರೂ, ಇವರು ಉಲ್ಲಂಘಿಸಿದ್ದಾರೆ ಅಂತಾ ಪಾರ್ಕ್ ಮ್ಯಾನೇಜ್ ಮೆಂಟ್ ತಿಳಿಸಿದೆ. 2.5 ಮಿಲಿಯನ್ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ಈ ಕುಟುಂಬದ ಅದೃಷ್ಟ ಚೆನ್ನಾಗಿತ್ತು, ಹೀಗಾಗಿ ಬದುಕುಳಿದಿದ್ದಾರೆ ಅಂತಾ ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...