alex Certify
ಕನ್ನಡ ದುನಿಯಾ       Mobile App
       

Kannada Duniya

ಹಗ್ಗವೂ ಇಲ್ಲದೆ 29 ಮಹಡಿ ಕಟ್ಟಡ ಏರಿದ್ದಾನೆ ಈ ಸ್ಪೈಡರ್ ಮ್ಯಾನ್

spain_spiderman_58410ಫ್ರಾನ್ಸ್ ನಲ್ಲಿ ವ್ಯಕ್ತಿಯೊಬ್ಬ ದಂಗುಬಡಿಸುವಂತಹ ಸಾಹಸ ಮಾಡಿದ್ದಾನೆ. ಹಗ್ಗದ ಸಹಾಯವೂ ಇಲ್ಲದೆ 29 ಮಹಡಿ ಕಟ್ಟಡವನ್ನು ಬರಿಗೈನಲ್ಲೇ ಏರಿದ್ದಾನೆ. ಈ ಅಪಾಯಕಾರಿ ಸಾಹಸಕ್ಕೆ ಆತ ತೆಗೆದುಕೊಂಡ ಸಮಯ ಕೇವಲ 20 ನಿಮಿಷ.

alain-robert_984e1308-503d-11e7-8a38-d46223a68388

ರಾಬರ್ಟ್ ಅಲೈನ್ ಗೆ ಈಗ 54 ವರ್ಷ. ಇವನನ್ನು ಎಲ್ರೂ ಫ್ರೆಂಚ್ ಸ್ಪೈಡರ್ ಮ್ಯಾನ್ ಅಂತಾನೇ ಕರೆಯುತ್ತಾರೆ. ಈತ ಹಗ್ಗದ ಸಹಾಯ ಪಡೆಯದೆ ಮೆಲಿಯಾ ಬಾರ್ಸಿಲೋನಾ ಸ್ಕೈ ಹೋಟೆಲ್ ಅನ್ನು ಸರಸರನೆ ಏರಿದ್ದಾನೆ. ಈ ಹೋಟೆಲ್ 114 ಮೀಟರ್ ಅಂದ್ರೆ 374 ಅಡಿ ಎತ್ತರವಿದೆ.

ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ಕಟ್ಟಡ ಏರಿದ ರಾಬರ್ಟ್ ಪೊಲೀಸರ ಕೆಂಗಣ್ಣಿಗೂ ತುತ್ತಾಗಿದ್ದಾನೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ, ಆದ್ರೆ ಯಾವುದೇ ಪ್ರಕರಣ ದಾಖಲಿಸಿಲ್ಲ. ರಾಬರ್ಟ್ ಈ ಹಿಂದೆ ಕೂಡ  ಅತಿ ಎತ್ತರದ ಕಟ್ಟಡಗಳನ್ನು ಕೂಡ ಹಗ್ಗದ ಸಹಾಯವಿಲ್ಲದೆ ಏರಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...