alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ತಾರೆಗೆ ಮಕ್ಕಳಿಂದ ಬರ್ತಿರೋ ಮೆಸೇಜ್ ಎಂಥದ್ದು ಗೊತ್ತಾ?

ಫ್ರಾನ್ಸ್ ನ ಪೋರ್ನ್ ತಾರೆ ನಿಕಿತಾ ಬೆಲ್ಲುಸಿ ಅಶ್ಲೀಲ ಮೆಸೇಜ್ ಗಳ ಕಾಟಕ್ಕೆ ಬೇಸತ್ತಿದ್ದಾಳೆ. ಆಕೆಗೆ ಇಂತಹ ಕೆಟ್ಟ ಸಂದೇಶಗಳನ್ನು ಕಳಿಸ್ತಾ ಇರೋದು ಕೇವಲ ವಯಸ್ಕರು ಮಾತ್ರವಲ್ಲ, 12 ವರ್ಷದ ಮಕ್ಕಳು ಕೂಡ ಅಂತಹ ಮೆಸೇಜ್ ಮಾಡ್ತಿದ್ದಾರೆ. ಈ ವಿಚಾರವನ್ನು ಪೋರ್ನ್ ನಟಿ ಟ್ವಿಟ್ಟರ್ ನಲ್ಲಿ ಬಹಿರಂಗಪಡಿಸಿದ್ದಾಳೆ.

ಮಕ್ಕಳು ಕಳಿಸಿರೋ ಅಶ್ಲೀಲ ಮೆಸೇಜ್ ಗಳ ಸ್ಕ್ರೀನ್ ಶಾಟ್ ಗಳನ್ನೂ ಶೇರ್ ಮಾಡಿದ್ದಾಳೆ. ಮಕ್ಕಳಿಗೆ ಸರಿಯಾಗಿ ಲೈಂಗಿಕ ಶಿಕ್ಷಣ ನೀಡದೇ ಇರೋದು ಹೆತ್ತವರ ತಪ್ಪು ಅನ್ನೋದು ನಿಕಿತಾ ಆರೋಪ. 12 ವರ್ಷದ ಹುಡುಗರು ತಮಗೆ ನಗ್ನ ಫೋಟೋಗಳನ್ನು ಕಳಿಸುವಂತೆ ನಿಕಿತಾಗೆ ಮೆಸೇಜ್ ಕಳಿಸ್ತಾರೆ.

ಅಷ್ಟೇ ಅಲ್ಲ ತನ್ನ ಜೊತೆಗೆ ಸೆಕ್ಸ್ ಮಾಡು, ಕಿಸ್ ಮಾಡು ಅಂತೆಲ್ಲಾ ಅನುಚಿತವಾದ ಬೇಡಿಕೆಗಳನ್ನು ಪೋರ್ನ್ ತಾರೆಯ ಮುಂದಿಡುತ್ತಿದ್ದಾರೆ. ಹಾಗಾಗಿ ಮಕ್ಕಳು ಏನು ಮಾಡ್ತಿದ್ದಾರೆ ಅನ್ನೋದನ್ನು ಹೆತ್ತವರು ಗಮನಿಸಿಬೇಕು ಅನ್ನೋದು ನಿಕಿತಾಳ ಅಭಿಪ್ರಾಯ.

ಮಕ್ಕಳಿಗೆ ಪಾಠ, ಶಿಸ್ತು ಕಲಿಸೋದು ಸೆಕ್ಸ್ ವರ್ಕರ್ ಗಳ ಕೆಲಸವಲ್ಲ ಅಂತಾನೂ ನಿಖಿತಾ ಸ್ಪಷ್ಟವಾಗಿ ಹೇಳಿದ್ದಾಳೆ. ನಗ್ನ ಫೋಟೋ ಕಳಿಸುವಂತೆ ಕೇಳಿದ್ದ 13ರ ಬಾಲಕನಿಗೆ ಮೊದಲು ಹೋಮ್ ವರ್ಕ್ ಮಾಡು, ಮತ್ತೊಮ್ಮೆ ಇಂತಹ ಬೇಡಿಕೆ ಇಟ್ರೆ ನಗ್ನ ಫೋಟೋಗಳನ್ನು ನಿನ್ನ ಹೆತ್ತವರಿಗೆ ಕಳಿಸೋದಾಗಿ ಪ್ರತಿಕ್ರಿಯಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...