alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಸ್ಮೆಟಿಕ್ ಸರ್ಜರಿ ಹುಚ್ಚು ಹಿಡಿಸಿಕೊಂಡವನು ಖರ್ಚು ಮಾಡಿದ್ದೆಷ್ಟು…?

ಪ್ಲಾಸ್ಟಿಕ್ ಸರ್ಜರಿ ಈಗ ಕಾಮನ್ ಆಗಿಬಿಟ್ಟಿದೆ. ಸೆಲೆಬ್ರಿಟಿಗಳಿಂದ ಹಿಡಿದು ಕಾಮನರ್ಸ್ ವರೆಗೆ ಎಲ್ಲರೂ ಕಾಸ್ಮೆಟಿಕ್ ಸರ್ಜರಿಗೆ ಮುಗಿಬೀಳ್ತಿದ್ದಾರೆ. ಎಷ್ಟೋ ಬಾರಿ ಶಸ್ತ್ರಚಿಕಿತ್ಸೆಯ ಪರಿಣಾಮ ಭೀಕರವಾಗಿರುತ್ತದೆ. ಫ್ರಾನ್ಸ್ ನಲ್ಲಿ ಯುವಕನೊಬ್ಬನ ಸ್ಥಿತಿ ಕೂಡ ಹೀಗೆಯೇ ಆಗಿದೆ.

ಸಿರಿಲ್ ರೋಕ್ಸ್ ಎಂಬ ಯುವಕನಿಗೆ ಮರ್ಲಿನ್ ಮನ್ರೋ ಅಂದ್ರೆ ಪಂಚಪ್ರಾಣ. ಅವರದ್ದೇ ರೀತಿಯ ತುಟಿ ಹೊಂದಬೇಕು ಅನ್ನೋ ಆಸೆ. ಅದಕ್ಕಾಗಿ ಸಿರಿಲ್ ಸುಮಾರು 5000 ಪೌಂಡ್ ಹಣ ಖರ್ಚು ಮಾಡಿ ಸರ್ಜರಿ ಮಾಡಿಸಿಕೊಂಡಿದ್ದಾನೆ. ಬುಟೊಕ್ಸ್ ನಂತರ ಅವನ ಸ್ಥಿತಿ ಮಾತ್ರ ದೇವರಿಗೇ ಪ್ರೀತಿ.

ಒಂದು ಶಸ್ತ್ರಚಿಕಿತ್ಸೆಗೆ ಅದು ಮುಕ್ತಾಯವಾಗಿಲ್ಲ. ಕಳೆದ 18 ತಿಂಗಳುಗಳಲ್ಲಿ ಈ ಯುವಕ ಸುಮಾರು 20 ಬಗೆಯ ಚಿಕಿತ್ಸೆಗೆ ಒಳಗಾಗಿದ್ದಾನೆ. 16 ಬಾರಿ ತುಟಿಗಳ ಆಕಾರ ಬದಲಾವಣೆಗೆ ಸರ್ಜರಿ ಮಾಡಲಾಗಿದೆ. ಈಗ ಆ ಶಸ್ತ್ರಚಿಕಿತ್ಸೆಗಳಿಗೆ ಸಿರಿಲ್ ಅಡಿಕ್ಟ್ ಆಗಿಬಿಟ್ಟಿದ್ದಾನೆ.

ತುಟಿಗಳಿಗೆ ಇನ್ನೊಂದಷ್ಟು ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದಾನೆ. ಅಷ್ಟೇ ಅಲ್ಲ ಮೂಗು, ಕೆನ್ನೆ, ಗಡ್ಡ ಎಲ್ಲದರ ಆಕಾರವನ್ನೂ ಬದಲಾಯಿಸಿಕೊಳ್ಳುವುದು ಇವನ ಆಸೆ. ಆ ಇಂಜೆಕ್ಷನ್ ಗಳೇ ತನಗೆ ಚಟವಾಗಿದೆ ಅಂತಾ ಸಿರಿಲ್ ಹೇಳಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...