alex Certify
ಕನ್ನಡ ದುನಿಯಾ       Mobile App
       

Kannada Duniya

ಬಲೂಚಿಸ್ತಾನ ಸ್ವಾತಂತ್ರ್ಯ ಅಭಿಯಾನ ತಡೆಯಲು ಮುಂದಾದ ಪಾಕ್ ಗೆ ಮುಖಭಂಗ

ಫ್ರೀ ಬಲೂಚಿಸ್ತಾನ್ ಅಭಿಯಾನದ ವಿರುದ್ಧ ಹೋರಾಟಕ್ಕೆ ಸಜ್ಜಾಗಿದ್ದ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. ಅಭಿಯಾನದ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಪಾಕ್ ಒತ್ತಾಯವನ್ನು ಯುನೈಟೆಡ್ ಕಿಂಗ್ಡಮ್ಸ್ ಅಡ್ವರ್ಟೈಸಿಂಗ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ ತಳ್ಳಿ ಹಾಕಿದೆ.

ಸ್ವತಂತ್ರ ಬಲೂಚಿಸ್ತಾನಕ್ಕಾಗಿ ಆಗ್ರಹಿಸಿ ಅಭಿಯಾನ ನಡೆಸಲಾಗುತ್ತಿದ್ದು, ಲಂಡನ್ ನ ಬಸ್ ಹಾಗೂ ಟ್ಯಾಕ್ಸಿಗಳ ಮೇಲೆಲ್ಲ ಜಾಹೀರಾತನ್ನು ಪ್ರಕಟಿಸಲಾಗಿದೆ. ಈ ಜಾಹೀರಾತುಗಳಿಗೆ ಬ್ರೇಕ್ ಹಾಕಬೇಕು ಅನ್ನೋದು ಪಾಕಿಸ್ತಾನದ ಒತ್ತಾಯ. ಇದಕ್ಕಾಗಿ ಪಾಕ್ ಎಎಸ್ಎಗೆ ಮನವಿ ಸಲ್ಲಿಸಿತ್ತು.

ಆದ್ರೆ ಈ ಜಾಹೀರಾತು ಬ್ರಿಟನ್ ನ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಎಎಸ್ಎ ಸ್ಪಷ್ಟಪಡಿಸಿದೆ. ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಲು ಜಾಹೀರಾತುದಾರನಿಗೆ ಹಕ್ಕಿದೆ ಅಂತಾ ಹೇಳಿದೆ. ಪಾಕಿಸ್ತಾನದ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತೆಗೆ ಈ ಜಾಹೀರಾತು ಧಕ್ಕೆ ತಂದಿಲ್ಲ, ಹಾಗಾಗಿ ಅದನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲವೆಂದು ಖಡಕ್ಕಾಗಿ ಹೇಳಿಬಿಟ್ಟಿದೆ.

https://www.pscp.tv/w/bOw64TFlUkt4RGdQcWFiS3d8MXlvSk1NRHBlUm9KUTvNMC-9J01aREwevSZ1GAn03aONbO5lTVCMhslxup2K

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...