alex Certify
ಕನ್ನಡ ದುನಿಯಾ       Mobile App
       

Kannada Duniya

12 ವರ್ಷಗಳ ನಂತರ ಮನೆ ಸೇರಿದೆ ಮುದ್ದಿನ ಮಿಯಾವ್

cat

12 ವರ್ಷಗಳ ಹಿಂದೆ ನಡೆದ ಘಟನೆ. ಕಪ್ಪು ಬಣ್ಣದ ಮುದ್ದಾದ ಈ ಬೆಕ್ಕು ಕಾಣೆಯಾಗಿತ್ತು. ಅದ್ಹೇಗೋ ಹೊರಹೋಗಿದ್ದ ಜಾರ್ಜ್ ಎಂಬ ಬೆಕ್ಕು ಮನೆದಾರಿ ತಪ್ಪಿಸಿಕೊಂಡು ಬಿಟ್ಟಿತ್ತು. ಫ್ರೆಡಾ ವ್ಯಾಟ್ಸನ್ ಗೆ ಈ ಬೆಕ್ಕು ಅಂದ್ರೆ ಪಂಚಪ್ರಾಣ.

ತಿಂಗಳುಗಳೇ ಕಳೆದ್ರೂ ಜಾರ್ಜ್ ವಾಪಸ್ ಬರದೇ ಇದ್ದಿದ್ದನ್ನು ನೋಡಿ, ಬಹುಷಃ ಬೆಕ್ಕು ಬದುಕಿ ಉಳಿದಿಲ್ಲ ಅಂತಾನೇ ಫ್ರೆಡಾ ಭಾವಿಸಿದ್ಲು. ಬೆಕ್ಕಿನ ಆಸೆಯನ್ನೇ ಬಿಟ್ಟುಬಿಟ್ಟಿದ್ಲು. ಆದ್ರೆ ಈಗ 12 ವರ್ಷಗಳ ನಂತರ ಪ್ರೀತಿಯ ಮಾರ್ಜಾಲ ಆಕೆಗೆ ಮರಳಿ ಸಿಕ್ಕಿದೆ.

cat1

ಫ್ರೆಡಾ ತಾನು ಸಾಕಿದ್ದ ಬೆಕ್ಕಿನ ಮೈಮೇಲೆ ಮನೆಯ ವಿಳಾಸವನ್ನು ಹಚ್ಚೆ ಹಾಕಿಸಿದ್ಲು. ಆದ್ರೆ ಫ್ರೆಡಾ ಆ ಮನೆಯನ್ನು ಬದಲಾಯಿಸಿ ವರ್ಷಗಳೇ ಕಳೆದಿವೆ. ಯಾರೋ ಬೆಕ್ಕಿನ ಮೈಮೇಲಿದ್ದ ವಿಳಾಸ ಗುರುತಿಸಿ, ಹುಡುಕಿಕೊಂಡು ಬಂದಿದ್ರು. ಬೆಕ್ಕನ್ನು ಫ್ರೆಡಾಳ ಸಂಬಂಧಿಕರ ಮನೆಗೆ ತಂದು ಬಿಟ್ಟಿದ್ರು.

ಬೆಕ್ಕು ಮರಳಿ ಸಿಕ್ಕಿದೆ ಅನ್ನೋ ಸುದ್ದಿ ಕೇಳಿ ಫ್ರೆಡಾ ಸಂತೋಷಕ್ಕೆ ಪಾರವೇ ಇರಲಿಲ್ಲ. ರಾತ್ರಿಯಿಡೀ ನಿದ್ದೆಯನ್ನೂ ಮಾಡದೆ ಬೆಕ್ಕನ್ನು ನೋಡಲು ಫ್ರೆಡಾ ಕಾದಿದ್ದಾಳೆ.

ಮಿಯಾವ್ ಕೂಡ ತನ್ನ ಒಡತಿಯನ್ನು ಮರೆತಿರಲಿಲ್ಲ. ಫ್ರೆಡಾಳನ್ನು ನೋಡ್ತಿದ್ದಂತೆ ಮೈ ಹೊಸೆಯುತ್ತ ಮುದ್ದು ಮಾಡಿದೆ. ಬೆಕ್ಕಿಗೆ ಈಗಾಗ್ಲೇ 14 ವರ್ಷವಂತೆ. ಇನ್ನೊಂದಷ್ಟು ವರ್ಷಗಳು ಜಾರ್ಜ್ ನಮ್ಮ ಜೊತೆ ಇರಬೇಕು ಅಂತಾ ಫ್ರೆಡಾ ಆಸೆಪಟ್ಟಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...