alex Certify
ಕನ್ನಡ ದುನಿಯಾ       Mobile App
       

Kannada Duniya

ಆಟವಾಡುವಾಗಲೇ ಗಾಲ್ಫ್ ಬಾಲ್ ಹೊತ್ತೊಯ್ದ ನರಿ

ಆಟವನ್ನು ನೋಡಿ ಆನಂದಿಸೋದು ಕಾಮನ್. ಆದ್ರೆ, ನೋಡುಗನೇ ಮೈದಾನಕ್ಕೆ ಇಳಿದ್ರೆ ಏನು ಆಗುತ್ತೆ ಎಂಬುದಕ್ಕೆ ಒಳ್ಳೆಯ ಉದಾಹರಣೆ ಸಿಕ್ಕಿದೆ.

ಯು.ಎಸ್.ಎ.ಯ ವೆಸ್ಟ್ ಸ್ಪ್ರಿಂಗ್ಫೀಲ್ಡ್ ನಲ್ಲಿ ಗಾಲ್ಫ್ ಕೋರ್ಸ್ ನಲ್ಲಿ ನರಿಯೊಂದು ಪಂದ್ಯ ನೋಡುತ್ತಾ ಕುಳಿತಿತ್ತು. ಅಂಗಳದಲ್ಲಿದ್ದ ಒಬ್ಬ ಗಾಲ್ಫರ್, ಬ್ಯಾಟ್ ನಿಂದ ಚೆಂಡನ್ನು ಗುರಿಯತ್ತ ಹೊಡೆದಿದ್ದಾರೆ. ಅಷ್ಟೊತ್ತು ಸುಮ್ಮನೆ ಒಂದು ತುದಿಯಲ್ಲಿ ಕುಳಿತು ಪಂದ್ಯ ನೋಡ್ತಾ ಇದ್ದ ನರಿ, ಓಡಿ ಹೋಗಿ ಚೆಂಡನ್ನು ಬಾಯಲ್ಲಿ ಹಿಡಿದು ಓಡಿ ಹೋಗಿದೆ. ಈ ದೃಶ್ಯವನ್ನು ಸ್ಪ್ರಿಂಗ್ಫೀಲ್ಡ್ ಕ್ಲಬ್ ಸಾಮಾಜಿಕ ತಾಣದಲ್ಲಿ ಹಾಕಿದ್ದು, ಭಾರೀ ವೈರಲ್ ಆಗ್ತಾ ಇದೆ.

ನರಿ ಚೆಂಡನ್ನು ಬಿಡದೆ ಇದ್ದಗ ಆಟಗಾರರು ಬೇರೆ ಚೆಂಡನ್ನು ಅದೇ ಸ್ಥಳದಲ್ಲಿ ಇಟ್ಟು ಆಟ ಮುಂದುವರೆಸಿದ್ದಾರೆ. ಫೇಸ್ ಬುಕ್ ನಲ್ಲಿ ಈ ವಿಡಿಯೋ ನೋಡಿದ ಅಭಿಮಾನಿಗಳು ಸಖತ್ ಎಂಜಾಯ್ ಮಾಡಿದ್ದಾರೆ.

If your ball has mysteriously disappeared over the past month………we think we know why! 🦊

Posted by Springfield Country Club on Friday, August 17, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...