alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ಜ್ಯೋತಿಷಿಗಳಿಗೆ ಗಲ್ಫ್ ರಾಷ್ಟ್ರದಲ್ಲಿ ಫುಲ್ ಡಿಮ್ಯಾಂಡ್

ಪ್ಲಂಬರ್ ಗಳು ಮತ್ತು ನರ್ಸ್ ಗಳ ನಂತರ ಈಗ ಕೇರಳದ ಜ್ಯೋತಿಷಿಗಳು ಗಲ್ಫ್ ರಾಷ್ಟ್ರಕ್ಕೆ ಅದೃಷ್ಟ ಅರಸಿ ಹೊರಟಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ಪ್ರಮುಖ ಉದ್ಯಮಿಯೊಬ್ಬರು ಕೇರಳದ ಕನಿಷ್ಠ 10 ಜ್ಯೋತಿಷಿಗಳು ಬೇಕಾಗಿದ್ದಾರೆ ಅಂತಾ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದಾರೆ.

ಭಾರತೀಯ ಜ್ಯೋತಿಷ್ಯಶಾಸ್ತ್ರ ಬಲ್ಲ, ಚೆನ್ನಾಗಿ ಹಿಂದಿ ಮತ್ತು ಇಂಗ್ಲಿಷ್ ಮಾತನಾಡಬಲ್ಲ, ಗಲ್ಫ್ ನಲ್ಲಿ ಸೆಟಲ್ ಆಗಲು ಇಚ್ಛಿಸುವ ಜ್ಯೋತಿಷಿಗಳು ಬೇಕು ಅಂತಾ ಜಾಹೀರಾತಿನಲ್ಲಿ ಬರೆಯಲಾಗಿದೆ. ಇದೇ ತಿಂಗಳ ಕೊನೆಯಲ್ಲಿ ವಾಕ್ ಇನ್ ಇಂಟರ್ವ್ಯೂ ಕೂಡ ಏರ್ಪಡಿಸಲಾಗಿದೆ.

ಹರಳು, ಮುತ್ತು, ರತ್ನಗಳಿಗೆ ಜ್ಯೋತಿಷ್ಯಶಾಸ್ತ್ರದಲ್ಲಿರುವ ಮಹತ್ವವನ್ನು ಗ್ರಾಹಕರಿಗೆ ತಿಳಿಸಿಕೊಡುವುದು ಜ್ಯೋತಿಷಿಗಳ ಕೆಲಸ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 1 ಗಂಟೆವರೆಗೂ ಕೆಲಸದ ಸಮಯ. ಮಧ್ಯೆ 2 ಗಂಟೆಗಳ ಬಿಡುವು ಕೂಡ ಸಿಗುತ್ತದೆ. ಗ್ರಾಹಕರನ್ನು ಅವರು ಯಾವ ರೀತಿ ನಿಭಾಯಿಸ್ತಾರೆ ಅನ್ನೋದರ ಮೇಲೆ ಸಂಬಳ ನಿರ್ಧಾರವಾಗುತ್ತದೆ.

ಕನಿಷ್ಠ 50,000 ರೂಪಾಯಿ ವೇತನವನ್ನು ಕಂಪನಿ ನೀಡಲಿದೆ. ಕೆಲಸ ಚೆನ್ನಾಗಿದ್ದರೆ ಕಮಿಷನ್ ಕೂಡ ಸಿಗುತ್ತದೆ. ಮೊದಲ ಎರಡು ತಿಂಗಳು ವಸತಿ ವ್ಯವಸ್ಥೆಯನ್ನೂ ಕಂಪನಿಯೇ ಮಾಡಿಕೊಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...