alex Certify
ಕನ್ನಡ ದುನಿಯಾ       Mobile App
       

Kannada Duniya

ಕದ್ದ ಹಣವನ್ನು 20 ವರ್ಷಗಳ ಬಳಿಕ ಬಡ್ಡಿಯೊಂದಿಗೆ ಮರಳಿಸಿದ್ದಾಳೆ ಮಹಿಳೆ

ವಾಷಿಂಗ್ಟನ್‌: ತೆಗೆದುಕೊಂಡ ಸಾಲವನ್ನೇ ವಾಪಾಸ್‌ ಮಾಡುವವರ ಸಂಖ್ಯೆ ಈ ಕಾಲದಲ್ಲಿ ವಿರಳ. ಇನ್ನು ಕದ್ದ ಹಣವನ್ನು ವಾಪಾಸು ಮಾಡುವವರನ್ನು ಎಲ್ಲಿ ಹುಡುಕಬಹುದು? ಆದರೂ, ಬೆರಳೆಕೆಯ ಜನರಲ್ಲಿ ಇನ್ನೂ ಪ್ರಾಮಾಣಿಕತೆ ಮರೆಯಾಗಿಲ್ಲ ಎಂಬುದು ಈ ಘಟನೆ ಪುಷ್ಟೀಕರಿಸಿದೆ.

20 ವರ್ಷಗಳ ಹಿಂದೆ ಹೋಟೆಲ್‌ನಲ್ಲಿ ವೇಯ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವಳು, ಅದೇ ಹೋಟೆಲ್‌ನಿಂದ ಕದ್ದ ಹಣವನ್ನು ಈಗ ವಾಪಾಸು ಮಾಡಿದ್ದಾಳೆ. ಇಂತಹದೊಂದು ಅಪರೂಪದ ಪ್ರಾಮಾಣಿಕತೆಯ ಕಥೆಗೆ ಅಮೆರಿಕ ವಾಷಿಂಗ್ಟನ್‌ ನಗರದ ಚಾರೋ ಕೆಫೆ ಸಾಕ್ಷಿಯಾಗಿದೆ.

ಯುನಿವರ್ಸಿಟಿಯೊಂದರಲ್ಲಿ ಕಲಿಯುತ್ತ, ಉಳಿದ ಸಮಯದಲ್ಲಿ ವೇಯ್ಟರ್‌ ಆಗಿ ದುಡಿಯುತ್ತಿದ್ದ ಹುಡುಗಿಯೋರ್ವಳು, ಹೋಟೆಲ್‌ನಿಂದ ಕೆಲ ಡಾಲರ್‌ ಕದ್ದು ಹೋಗಿದ್ದಳು. ಇತ್ತೀಚೆಗೆ 1 ಸಾವಿರ ಡಾಲರ್‌ ಹಣ ಹಾಗೂ ಒಂದು ಪತ್ರವನ್ನೂ ಜತೆಗಿರಿಸಿ, ಅದರಲ್ಲಿ ಕದ್ದಿರುವ ವಿಚಾರಗಳನ್ನು ತಿಳಿಸಿದ್ದಾಳೆ. ಹಾಗೆಂದು ಆ ಹುಡುಗಿ ಹೋಟೆಲ್‌ ಮಾಲೀಕನನ್ನು ಭೇಟಿಯಾಗಿಲ್ಲ. ಹಣ ಹಾಗೂ ಪತ್ರವನ್ನು ಮಾತ್ರ ತಲುಪಿಸಿದ್ದಾಳೆ ಅಷ್ಟೇ! ಪತ್ರದಲ್ಲೂ ಹೆಸರು ನಮೂದಿಸದೇ, ಮಾಜಿ ನೌಕರ ಎಂದಷ್ಟೇ ಬರೆಯಲಾಗಿದೆ.

ಕದ್ದ ಕೆಲವು ಡಾಲರ್‌ಗಳಿಗೆ ಕ್ಷಮೆಯಾಚಿಸಿದ ಮಾಜಿ ವೇಯ್ಟರ್, 20 ವರ್ಷದ ಬಡ್ಡಿಯನ್ನೂ ಲೆಕ್ಕ ಹಾಕಿ 1 ಸಾವಿರ ಡಾಲರ್‌ ನ್ನು ಕವರ್‌ನಲ್ಲಿ ಹಾಕಿ ತಲುಪಿಸಿದ್ದಾಳೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...