alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿದ ಕ್ರಿಕೆಟಿಗ

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ದಕ್ಷಿಣ ಅಫ್ರಿಕಾದ ಮಾಜಿ ಕ್ರಿಕೆಟಿಗ ಡಿಯೋನ್ ತಾಲ್ಜಾರ್ಡ್ ನನ್ನು ನ್ಯಾಯಾಲಯ ದೋಷಿ ಎಂದು ಘೋಷಿಸಿದ್ದು, 18 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.

1993 ರಿಂದ 1999 ರ ವರೆಗೆ ದಕ್ಷಿಣ ಅಫ್ರಿಕಾದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಟಗಾರನಾಗಿದ್ದ ಡಿಯೋನ್ ತಾಲ್ಜಾರ್ಡ್ ಬಳಿಕ ಯುನೈಟೆಡ್ ಕಿಂಗ್ಡಂ ಗೆ ಸ್ಥಳಾಂತರಗೊಂಡಿದ್ದರು. 2002 ರಿಂದ 2012 ರ ವರೆಗೆ 47 ವರ್ಷದ ಮಹಿಳೆಯೊಬ್ಬರ ಮೇಲೆ ಡಿಯೋನ್ ತಾಲ್ಜಾರ್ಡ್ ನಿರಂತರವಾಗಿ ಅತ್ಯಾಚಾರವೆಸಗಿದ್ದಲ್ಲದೇ ಮಾರಣಾಂತಿಕ ಹಲ್ಲೆ ನಡೆಸಿದ್ದ ಆರೋಪವೂ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮ್ಯಾಂಚೆಸ್ಟರ್ ನ್ಯಾಯಾಲಯ, ಡಿಯೋನ್ ತಾಲ್ಜಾರ್ಡ್ ಅಪರಾಧಿಯೆಂದು ಘೋಷಿಸಿ 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಜೈಲು ಶಿಕ್ಷೆಗೆ ಗುರಿಯಾಗಿರುವ ಡಿಯೋನ್ ತಾನು ನಿರಪರಾಧಿಯೆಂದು ಹೇಳಿಕೊಂಡಿದ್ದು, ಆತನ ನೆರವಿಗೆ ಧಾವಿಸಿರುವ ಸ್ನೇಹಿತರು ಪ್ರಕರಣದ ಮರು ವಿಚಾರಣೆ ನಡೆಯಬೇಕೆಂದು ಕೋರಿ ಆನ್ ಲೈನ್ ಅಭಿಯಾನ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...