alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ಲಾಭಕ್ಕಾಗಿ ಸ್ವಯಂ ಬಂಧನಕ್ಕೊಳಗಾಗುತ್ತಿದ್ದಾರಾ ನವಾಜ್ ಶರೀಫ್?

ಅಕ್ರಮ ಆಸ್ತಿ ಖರೀದಿ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತವರ ಪುತ್ರಿ ಮರಿಯಮ್ ಶರೀಫ್ ಇಂದು ಪಾಕಿಸ್ತಾನಕ್ಕೆ ಮರಳುತ್ತಿದ್ದು, ಅವರುಗಳು ಲಾಹೋರ್ ಗೆ ಬಂದಿಳಿಯುತ್ತಿದ್ದಂತೆಯೇ ಬಂಧಿಸಲಾಗುತ್ತಿದೆ.

ನ್ಯಾಯಾಲಯ ತೀರ್ಪು ಪ್ರಕಟಿಸುವ ವೇಳೆ ನವಾಜ್ ಶರೀಫ್ ಹಾಗೂ ಮರಿಯಮ್ ಶರೀಫ್ ಲಂಡನ್ ನಲ್ಲಿದ್ದು, ಪಾಕಿಸ್ತಾನಕ್ಕೆ ತೆರಳಿದರೆ ತಮ್ಮ ಬಂಧನವಾಗುವುದೆಂಬ ಅರಿವಿದ್ದರೂ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ಆಗಮಿಸುತ್ತಿದ್ದಾರೆನ್ನಲಾಗಿದೆ.

ಪಾಕಿಸ್ತಾನದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ತಮ್ಮ ಬಂಧನವಾದರೆ ಸಾರ್ವಜನಿಕರ ಅನುಕಂಪದ ಕಾರಣಕ್ಕೆ ಪಕ್ಷ ಬಹುಮತ ಗಳಿಸಬಹುದೆಂಬ ಲೆಕ್ಕಾಚಾರ ನವಾಜ್ ಶರೀಫರ ಈ ನಡೆಯ ಹಿಂದಿದೆ ಎಂದು ಹೇಳಲಾಗುತ್ತಿದೆ.

ನವಾಜ್ ಶರೀಫ್ ಮತ್ತವರ ಪುತ್ರಿ ಈಗಾಗಲೇ ಅಬುದಾಬಿ ತಲುಪಿದ್ದು, ಸಂಜೆ 6.15 ರ ಸುಮಾರಿಗೆ ಲಾಹೋರ್ ತಲುಪುವ ನಿರೀಕ್ಷೆಯಿದೆ. ವಿಮಾನ ನಿಲ್ದಾಣದಲ್ಲಿ ಅವರುಗಳು ಬಂದಿಳಿಯುತ್ತಿದ್ದಂತೆಯೇ ಹೆಲಿಕಾಪ್ಟರ್ ಮೂಲಕ ರಾವಲ್ಪಿಂಡಿ ಜೈಲಿಗೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...