alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಲೇಬೇಕು, ಬಿಯರ್ ಕೊಡುತ್ತೆ ನೋವಿನಿಂದ ಮುಕ್ತಿ

591090-alcohol-women

ಜಗತ್ತಿನ ಎಲ್ಲಾ ಕಡೆಗಳಲ್ಲೂ ಬಿಯರ್ ಪ್ರಿಯರಿದ್ದಾರೆ. ಇದನ್ನು ಕುಡಿದ್ರೆ ಆರೋಗ್ಯದ ಮೇಲೆ ನೆಗೆಟಿವ್ ಎಫೆಕ್ಟ್ ಇದೆ ಅನ್ನೋದ್ರಲ್ಲಿ ಅನುಮಾನ ಬೇಡ. ಆದ್ರೆ ಬಿಯರ್ ನಲ್ಲಿ ಆರೋಗ್ಯಕ್ಕೆ ಪೂರಕವಾದ ಕೆಲವು ಅಂಶಗಳು ಕೂಡ ಇವೆ ಅನ್ನೋದು ಇತ್ತೀಚೆಗೆ ನಡೆದ ಸಂಶೋಧನೆಯಲ್ಲಿ ದೃಢಪಟ್ಟಿದೆ.

ಅಲ್ಕೋಹಾಲ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ರೆ ನೋವಿನಿಂದ ಮುಕ್ತಿ ಕೊಡಬಲ್ಲ ಶಕ್ತಿ ಬಿಯರ್ ಗೆ ಇದೆ. ಪ್ಯಾರಾಸಿಟಮಾಲ್ ಗೆ ಬಿಯರ್ ಪರ್ಯಾಯ ಅಂತಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಲಂಡನ್ ನ ಗ್ರೀನ್ ವಿಚ್ ಯೂನಿವರ್ಸಿಟಿಯಲ್ಲಿ ಈ ಬಗ್ಗೆ ಸಂಶೋಧನೆ ನಡೆಸಲಾಗಿದೆ.

ಬಿಯರ್ ಕುಡಿಯೋದ್ರಿಂದ ನೋವಿನ ಅನುಭವ ಮಾಯವಾಗುತ್ತಂತೆ. ಇದು ಆತಂಕವನ್ನು ಕೂಡ ಕಡಿಮೆ ಮಾಡೋದ್ರಿಂದ ನೋವಿನ ಅನುಭವವಾಗುವುದಿಲ್ಲ. ಯಾರು ಬಿಯರ್ ಕುಡೀತಾರೋ ಅವರಿಗೆ ಹೆಚ್ಚು ನೋವಾಗುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಅಲ್ಕೋಹಾಲಿಕ್ ಬಿಯರ್, ಪೇಯ್ನ್ ಕಿಲ್ಲರ್ ನಂತೆ ಕೆಲಸ ಮಾಡುತ್ತದೆ ಎಂಬುದಕ್ಕೆ ವಿಜ್ಞಾನಿಗಳ ಬಳಿ ಸೂಕ್ತ ಪುರಾವೆಯೂ ಇದೆ.

ಬಿಯರ್ ಎಫೆಕ್ಟ್ ಪ್ಯಾರಸಿಟಮಾಲ್ ಗಿಂತಲೂ ಅಧಿಕ. ಆದ್ರೆ ದೀರ್ಘಕಾಲದಿಂದ ನೋವು ಅನುಭವಿಸುತ್ತಿರುವವರ ಮೇಲೆ ಬಿಯರ್ ಪರಿಣಾಮ ಅಷ್ಟಾಗಿ ಆಗುವುದಿಲ್ಲ. ಹೊಸ ಸಂಶೋಧನೆಯ ಪ್ರಕಾರ ಬಿಯರ್ ಒಂದು ನೋವು ನಿವಾರಕ ಪಾನೀಯ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...