alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ವಿಶ್ವದ ಅತಿ ಶ್ರೀಮಂತರ ಪಟ್ಟಿ

2017ರಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳು ಯಾರು ಗೊತ್ತಾ? ಫೋರ್ಬ್ಸ್ ಮ್ಯಾಗಝೀನ್ ಒಟ್ಟು 30 ಸಿರಿವಂತರ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವದಲ್ಲೇ ಅತ್ಯಂತ ಶ್ರೀಮಂತ ಅಂದ್ರೆ ಮೈಕ್ರೋಸಾಫ್ಟ್ ಒಡೆಯ ಬಿಲ್ ಗೇಟ್ಸ್. ಇವರ ಒಟ್ಟಾರೆ ಆಸ್ತಿ 86 ಬಿಲಿಯನ್ ಡಾಲರ್.

ಎರಡನೇ ಸ್ಥಾನದಲ್ಲಿರುವ ವಾರೆನ್ ಬಫೆಟ್ ಅವರ ಬಳಿ 75.6 ಬಿಲಿಯನ್ ಡಾಲರ್ ಮೊತ್ತದ ಆಸ್ತಿ ಇದೆ. ಅಮೆಜಾನ್ ಸಿಇಓ ಜೆಫ್ ಬೆಜೋಸ್ ಮೂರನೇ ಸ್ಥಾನದಲ್ಲಿದ್ದು, ಇವರ ಆಸ್ತಿ 72.8 ಬಿಲಿಯನ್ ಡಾಲರ್. ಝಾರಾ ಕಂಪನಿಯ ಮಾಲೀಕ ಅಮಾನಿಕೊ ಒರ್ಟೆಗಾ 71.3 ಬಿಲಿಯನ್ ಆಸ್ತಿ ಹೊಂದಿದ್ದು, ನಾಲ್ಕನೇ ಸ್ಥಾನದಲ್ಲಿದ್ದಾರೆ.

ಫೇಸ್ಬುಕ್ ಒಡೆಯ ಮಾರ್ಕ್ ಜುಕರ್ಬರ್ಗ್ ಅವರ ಒಟ್ಟು ಆಸ್ತಿ ಮೌಲ್ಯ 56 ಬಿಲಿಯನ್ ಡಾಲರ್. ಇವರಿಗೆ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನ ಲಭಿಸಿದೆ. 54.5 ಬಿಲಿಯನ್ ಡಾಲರ್ ಆಸ್ತಿ ಹೊಂದಿರೋ ಕಾರ್ಲೋಸ್ ಸ್ಲಿಮ್ 6ನೇ ಸ್ಥಾನ ಹಾಗೂ 52.2 ಬಿಲಿಯನ್ ಆಸ್ತಿಗೆ ಒಡೆಯರಾಗಿರೋ ಲ್ಯಾರಿ ಎಲಿಸನ್ 7ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

48.3 ಬಿಲಿಯನ್ ಆಸ್ತಿ ಹೊಂದಿರೋ ಚಾರ್ಲ್ಸ್ ಕೊಚ್ ಹಾಗೂ ಡೇವಿಡ್ ಕೊಚ್ 8ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಮೈಖೆಲ್ ಬ್ಲೂಂಬರ್ಗ್ ಅವರ ಆಸ್ತಿ ಒಟ್ಟು 47.5 ಬಿಲಿಯನ್ ಡಾಲರ್. ಇವರಿಗೆ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನ ದೊರೆತಿದೆ. 11ನೇ ಸ್ಥಾನದಲ್ಲಿರುವ ಬರ್ನಾರ್ಡ್ ಅರ್ನೌಲ್ಟ್ ಅವರ ಆಸ್ತಿ 41.5 ಬಿಲಿಯನ್ ಡಾಲರ್.

40.7 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಲಾರಿ ಪೇಜ್ 12 ಮತ್ತು 39.8 ಬಿಲಿಯನ್ ಡಾಲರ್ ಆಸ್ತಿ ಹೊಂದಿರೋ ಸರ್ಗೇ ಬ್ರಿನ್ 13ನೇ ಸ್ಥಾನ ಪಡೆದಿದ್ದಾರೆ. ಲೋರಿಯಲ್ ಒಡತಿ ಲಿಲಿಯನೆ ಬೆಟ್ಟನ್ ಕೋರ್ಟ್ ಗೆ 14ನೇ ಸ್ಥಾನ ಸಿಕ್ಕಿದೆ. ಇವರ ಒಟ್ಟಾರೆ ಆಸ್ತಿ 39.5 ಬಿಲಿಯನ್ ಡಾಲರ್.

34.1 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ ಎಸ್. ರೊಬ್ಸೊನ್ ವಾಲ್ಟನ್ 15ನೇ ಹಾಗೂ 34 ಬಿಲಿಯನ್ ಡಾಲರ್ ಆಸ್ತಿ ಹೊಂದಿರೋ ಜಿಮ್ ವಾಲ್ಟನ್ 16ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಅಲೈಸ್ ವಾಲ್ಟನ್ 17ನೇ ಸ್ಥಾನದಲ್ಲಿದ್ದು, ಅವರ ಆಸ್ತಿ ಮೌಲ್ಯ 33.8 ಬಿಲಿಯನ್ ಡಾಲರ್.

31.3 ಬಿಲಿಯನ್ ಡಾಲರ್ ಆಸ್ತಿ ಹೊಂದಿರೋ ವಾಂಗ್ ಜಿಯಾನ್ಲಿನ್ 18ನೇ ಸ್ಥಾನ ಪಡೆದಿದ್ದಾರೆ. 19ನೇ ಸ್ಥಾನ ದಕ್ಕಿಸಿಕೊಂಡಿರುವ ಲಿ ಕಾ ಶಿಂಗ್ ಅವರ ಒಟ್ಟು ಆಸ್ತಿ 31.2 ಬಿಲಿಯನ್ ಡಾಲರ್. 30.4 ಬಿಲಿಯನ್ ಡಾಲರ್ ಆಸ್ತಿಗೆ ಒಡೆಯ ಶೆಲ್ಡನ್ ಅಡಲ್ಸನ್ 20ನೇ ಅತಿ ದೊಡ್ಡ ಶ್ರೀಮಂತ.

ಮೈಕ್ರೋಸಾಫ್ಟ್ ನ ಸ್ಟೀವ್ ಬಾಲ್ಮರ್ 30 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದು 21ನೇ ಅತಿ ಶ್ರೀಮಂತ ಎನಿಸಿಕೊಂಡಿದ್ದಾರೆ. ಜಾರ್ಜ್ ಪೌಲೋ ಲೆಮನ್ 22ನೇ ಸ್ಥಾನದಲ್ಲಿದ್ದು, ಅವರ ಆಸ್ತಿ ಮೌಲ್ಯ 29.2 ಬಿಲಿಯನ್ ಡಾಲರ್. 23ನೇ ಶ್ರೀಮಂತ ಎನಿಸಿಕೊಂಡಿರೋ ಜ್ಯಾಕ್ ಮಾ 28.3 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.

ಬೀಟೆ ಹೀಸ್ಟರ್ ಹಾಗೂ ಡೇವಿಡ್ ಥಾಮ್ಸನ್ ಇಬ್ಬರೂ 24ನೇ ಸ್ಥಾನ ಪಡೆದಿದ್ದಾರೆ. ಇವರ ಆಸ್ತಿ ಮೌಲ್ಯ 27.2 ಬಿಲಿಯನ್ ಡಾಲರ್. 26ನೇ ಸ್ಥಾನದಲ್ಲಿರೋ ಜಾಕ್ವೆಲಿನ್ ಮಾರ್ಸ್ ಅವರ ಆಸ್ತಿ 27 ಬಿಲಿಯನ್ ಡಾಲರ್. ಜಾನ್ ಮಾರ್ಸ್ ಕೂಡ 26ನೇ ಸ್ಥಾನ ಅಲಂಕರಿಸಿದ್ದಾರೆ.

ನೈಕಿ ಕಂಪನಿಯ ಫಿಲ್ ನೈಟ್ 26.2 ಬಿಲಿಯನ್ ಆಸ್ತಿ ಹೊಂದಿದ್ದು, ಜಗತ್ತಿನ ಅತ್ಯಂತ ಶ್ರೀಮಂತರಲ್ಲಿ 28ನೆಯವರು. ನ್ಯೂಟೆಲ್ಲಾ ಚಾಕಲೇಟ್ಸ್ ಒಡತಿ ಮಾರಿಯಾ ಫ್ರಾಂಕಾ ಫಿಸ್ಸೊಲೋ 25.2 ಬಿಲಿಯನ್ ಡಾಲರ್ ಆಸ್ತಿಯೊಂದಿಗೆ 29ನೇ ಸ್ಥಾನದಲ್ಲಿದ್ದಾರೆ. ಜಾರ್ಜ್ ಸೊರೋಸ್ ಗೆ ಕೂಡ 29ನೇ ಸ್ಥಾನ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...