alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗಳನ ಅಂಗಳಕ್ಕೆ ನೆಗೆಯಲು ನೆರವು ಕೇಳಿದ ನಾಸಾ

mars-surface_57fdc3b2-ddd8-11e5-a762-0977dd9ba750

ಭಾರತದ ಇಸ್ರೋ ಸಂಸ್ಥೆಯ ಸಾಮರ್ಥ್ಯ ಇದೀಗ ವಿಶ್ವದ ಗಮನ ಸೆಳೆಯುತ್ತಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳನ ಅನ್ವೇಷಣೆಗಾಗಿ ಕೈ ಜೋಡಿಸಲು ಇಸ್ರೋಗೆ ಅಧಿಕೃತ ಅಹ್ವಾನ ನೀಡಿದೆ.

ಹೌದು. ಬಾಹ್ಯಾಕಾಶ ಅಧ್ಯಯನದಲ್ಲಿ ಮಹತ್ತರ ಸಾಧನೆ ಮಾಡಿರುವ ನಾಸಾ ಇದೀಗ ಇಸ್ರೋ ಸಂಸ್ಥೆ ಜತೆ ಕೈಜೋಡಿಸಲು ಮುಂದಾಗಿದ್ದು, ಈಗಾಗಲೇ ನಾವು ಸಾಕಷ್ಟು ಯಶಸ್ಸನ್ನು ಕಂಡಿದ್ದು ನಮ್ಮ ಜತೆಗೆ ಭಾರತವೂ ಸೇರಿದರೆ ಇನ್ನಷ್ಟು ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಈ ಕುರಿತು ಮಾತನಾಡಿರುವ ನಾಸಾ ಸಂಸ್ಥೆಯ ಭಾಗವಾದ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿಯ ನಿರ್ದೇಶಕ ಚಾರ್ಲ್ಸ್, 2020-2030 ರ ದಶಕದಲ್ಲಿ ಮಂಗಳನ ಅನ್ವೇಷಣೆಗೆ ಬಹಳಷ್ಟು ಯೋಜನೆಗಳು ರೂಪುಗೊಳ್ಳುತ್ತಿದ್ದು, ಇದೇ ವಿಚಾರವಾಗಿ ವಾಷಿಂಗ್ಟನ್ ನಲ್ಲಿ ಸದ್ಯದಲ್ಲೇ ನಡೆಯಲಿರುವ ಸಭೆಗೆ ಇಸ್ರೋಗೆ ಕೂಡ ಆಮಂತ್ರಣ ನೀಡಲಾಗಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...