alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಿಟನ್ ನಲ್ಲಿ ತಲೆನೋವಾಗಿದೆ ಭಾರತೀಯರ ಈ ಚಟ

pan lodon

ಯಾವುದಾದರೂ ರಸ್ತೆ, ಕಟ್ಟಡಗಳ ಮೂಲೆ ಮೊದಲಾದ ಸ್ಥಳಗಳಲ್ಲಿ ಉಗುಳಿ, ಉಗುಳಿ ಕೆಂಪಗೆ ಮಾಡಿರುವುದನ್ನು ನೋಡಿರುತ್ತೀರಿ. ಗುಟ್ಕಾ ಪ್ರಿಯರು, ಪಾನ್ ಅಗೆಯುವವರು ಬಾಯಿತುಂಬ ಅಗೆದು ಎಲ್ಲೆಂದರಲ್ಲಿ ಉಗಿದು ಗಲೀಜು ಮಾಡುವುದು ಇತ್ತೀಚೆಗೆ ಹೆಚ್ಚಾಗಿದೆ.

ಹೀಗೆ ಉಗುಳಿದ ಜಾಗ ಅಸಹ್ಯವಾಗಿ ಕಾಣುತ್ತದೆ. ಇಂತಹ ದೃಶ್ಯಗಳನ್ನು ಸಾಮಾನ್ಯವಾಗಿ ಭಾರತದಲ್ಲಿ ಮಾತ್ರ ಹೆಚ್ಚಾಗಿ ಕಾಣಲು ಸಾಧ್ಯ. ಆದರೆ, ಲಂಡನ್ ನಲ್ಲಿಯೂ ಇದೇ ಪರಿಸ್ಥಿತಿ ಉಂಟಾಗಿದೆ. ಎಲ್ಲೆಂದರಲ್ಲಿ ಪಾನ್ ಅಗೆದು ಉಗಿಯುವವರ ಸಂಖ್ಯೆ ಹೆಚ್ಚಾಗಿರುವುದರಿಂದ ರಸ್ತೆ, ಕಟ್ಟಡಗಳ ಮೂಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಂಪಗೆ ಪಾನ್ ಉಗುಳು ಕಾಣುವಂತಾಗಿದೆ. ಭಾರತೀಯರೇ ಹೆಚ್ಚಾಗಿ ವಾಸಿಸುವ ಸ್ಥಳಗಳಲ್ಲಿ ಇಂತಹ ದೃಶ್ಯಗಳನ್ನು ಕಾಣಬಹುದಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಪಾನ್ ಮಸಾಲ ಉಗಿದು ಗಲೀಜು ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ಭಾರೀ ಮೊತ್ತದ ದಂಡ ಕೂಡ ವಿಧಿಸಲಾಗುತ್ತದೆ. ಆದರೂ, ಕಂಡಕಂಡಲ್ಲಿ ಉಗುಳುವವರ ಸಂಖ್ಯೆ ಕಡಿಮೆಯಾಗಿಲ್ಲ.ಪಾನ್ ಪ್ರಿಯರು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದಾರೆ.

ಲಂಡನ್ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಗಲೀಜು ಮಾಡುವವರಿಗೆ 80 ಪೌಂಡ್ ದಂಡ ವಿಧಿಸಲಾಗುತ್ತದೆ. ಇಲ್ಲಿನ ರೆಸ್ಟೋರೆಂಟ್ ಗಳ ಬಳಿ ಪಾನ್ ಶಾಪ್ ಗಳಿದ್ದು, ಊಟ ಮಾಡಿದ ನಂತರ ಪಾನ್ ಅಗೆಯುತ್ತಾ ಎಲ್ಲೆಂದರಲ್ಲಿ ಉಗಿಯುತ್ತಾರೆ ಎನ್ನಲಾಗಿದೆ. ಇಂತಹ ಚಟಕ್ಕೆ ಕಡಿವಾಣ ಹಾಕುವುದೇ ಲಂಡನ್ ಆಡಳಿತಕ್ಕೆ ತಲೆನೋವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...