alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳಕ್ಕೆ ನೆರವಿನ ಹಸ್ತ ಚಾಚಿದ ಪಾಕ್ ನೂತನ ಪ್ರಧಾನಿ

ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್‍ ಖಾನ್, ಕೇರಳಕ್ಕೆ ಮಾನವೀಯ ಸಹಾಯ ಮಾಡಲು ಸಿದ್ಧರಿರೋದಾಗಿ ತಿಳಿಸಿದ್ದಾರೆ.

ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನಜೀವನ ಶೀಘ್ರ ಸಹಜ ಸ್ಥಿತಿಗೆ ಬರಲಿ ಎಂದು ಪ್ರಾರ್ಥಿಸಿರೋದಾಗಿ ಇಮ್ರಾನ್ ಖಾನ್ ತಿಳಿಸಿದ್ದಾರೆ. ಅಲ್ಲದೆ ಅವಶ್ಯಕತೆ ಬಿದ್ದರೆ, ಪಾಕಿಸ್ತಾನ ಮಾನವಿಯ ನೆರವು ನೀಡಲು ಸಿದ್ಧ ಎಂದು ಹೇಳಿದ್ದಾರೆ.

ಕೇರಳದಲ್ಲಿನ ಪ್ರವಾಹಕ್ಕೆ ಈವರೆಗೂ ಸುಮಾರು 237 ಜನ ಸಾವನ್ನಪ್ಪಿದ್ದಾರೆ. 14 ಲಕ್ಷ ಜನ ನಿರಾಶ್ರಿತರ ಕ್ಯಾಂಪ್ ಗಳಲ್ಲಿ ತಂಗಿದ್ದಾರೆ. ಪ್ರವಾಹದಿಂದ ಸುಮಾರು 20 ಸಾವಿರ ಕೋಟಿ ಹಾನಿಯಾದ ಬಗ್ಗೆ ಅಂದಾಜಿಸಲಾಗಿದೆ. ಅಲ್ಲದೆ ಕೇಂದ್ರಕ್ಕೆ, ಕೇರಳ 2600 ಕೋಟಿಯ ಪರಿಹಾರ ನೀಡುವಂತೆ ಒತ್ತಾಯಿಸಿದೆ. ಸದ್ಯ ಕೇಂದ್ರ 600 ಕೋಟಿ ಮಧ್ಯಂತರ ಪ್ಯಾಕೇಜ್ ಬಿಡುಗಡೆ ಮಾಡಿದೆ. ಕೇಂದ್ರ, ಬೇರೆ ದೇಶಗಳಿಂದ ಆರ್ಥಿಕ ನೆರವು ಪಡೆಯುವುದಿಲ್ಲ ಎಂದು ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...