alex Certify
ಕನ್ನಡ ದುನಿಯಾ       Mobile App
       

Kannada Duniya

ಶವಪೆಟ್ಟಿಗೆಯಲ್ಲಿ ಇರಲೇ ಇಲ್ಲ ಸಮಾಧಿ ಮಾಡಿದ್ದ ಮಗು

ಲಿಡಿಯಾ ರೀಡ್ ಎಂಬಾಕೆಯ ಮಗ 1975ರಲ್ಲಿ ಮೃತಪಟ್ಟಿದ್ದ. ಪುಟ್ಟ ಕಂದನನ್ನು ಕಳೆದುಕೊಂಡಿದ್ದ ಲಿಡಿಯಾ ಪ್ರತಿ ವಾರವೂ ಆತನ ಸಮಾಧಿಗೆ ಭೇಟಿ ನೀಡುತ್ತಿದ್ಲು. ಹೂವುಗಳೊಂದಿಗೆ ಬಂದು ಮರೆಯಾದ ಕಂದನನ್ನು ನೆನೆದು ಕಣ್ಣೀರು ಹಾಕುತ್ತಿದ್ಲು. ಲಿಡಿಯಾಗೆ ಮಗುವಿನ ಶವವನ್ನು ಸಮಾಧಿಯಿಂದ ಹೊರತೆಗೆಯಬೇಕೆಂಬ ಆಸೆಯಿತ್ತು.

ಇದಕ್ಕಾಗಿ ಹಲವು ವರ್ಷಗಳ ಕಾಲ ಹೋರಾಟ ನಡೆಸಿದ ಲಿಡಿಯಾಗೆ ಕೊನೆಗೂ ಸಂಸತ್ ಸದಸ್ಯರಿಂದ ಅನುಮತಿ ಸಿಕ್ಕಿತ್ತು. ಕಳೆದ ತಿಂಗಳು ಲಿಡಿಯಾಳ ಆಸೆಯಂತೆ ಶವಪೆಟ್ಟಿಗೆಯನ್ನು ಹೊರತೆಗೆಯಲಾಯ್ತು. ಅದರಲ್ಲಿ ಮಗು ಧರಿಸಿದ್ದ ಬಟ್ಟೆ, ಚಿಕ್ಕದೊಂದು ಕ್ರಾಸ್ ಬಿಟ್ರೆ ಇನ್ನೇನೂ ಇರಲಿಲ್ಲ.

ಪೆಟ್ಟಿಗೆಯಲ್ಲಿ ಮಗುವಿನ ಮೂಳೆಯೂ ಇರಲಿಲ್ಲ. 42 ವರ್ಷಗಳ ಕಾಲ ಆ ಪೆಟ್ಟಿಗೆಯೊಳಗೆ ಮಗ ಇದ್ದಾನೆ ಎಂದುಕೊಂಡು ಬರ್ತಿದ್ದ ಲಿಡಿಯಾಗೆ ಕೊನೆಗೂ ವಾಸ್ತವದ ಅರಿವಾಗಿದೆ. ನಿಜಕ್ಕೂ ತನ್ನ ಮಗ ಬದುಕಿಲ್ಲ ಅಂತಾ ಈಗ ಆಕೆಗೆ ಎನಿಸಿದೆಯಂತೆ.

ಆದ್ರೆ ಮಗುವಿನ ಶವ ಪೆಟ್ಟಿಗೆಯಲ್ಲಿ ಯಾಕಿಲ್ಲ ಅನ್ನೋದೇ ಅವಳ ಪ್ರಶ್ನೆ. ಹಲ್ಲುಗಳು ಅಥವಾ ಮೂಳೆಗಳ ಕುರುಹಾದ್ರೂ ಇರಬೇಕಿತ್ತು. ಬರೀ ಬಟ್ಟೆ ಮಾತ್ರ ಇದೆ, ಶವಸಂಸ್ಕಾರದಲ್ಲೇನಾದ್ರೂ ಯಡವಟ್ಟಾಗಿದ್ಯಾ ಅನ್ನೋದು ಲಿಡಿಯಾಳ ಅನುಮಾನ. ಈ ಬಗ್ಗೆ ತನಿಖೆಗೂ ಮಹಿಳೆ ಆಗ್ರಹಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...