alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿಬೀಳಿಸುತ್ತೆ ಮಾಸ್ಕೋದಲ್ಲಿ ಕಸದ ಬುಟ್ಟಿ ಮಾಡಿರೋ ಅವಾಂತರ

man-almost-hit-by-dumpster_650x400_41496399834

ಮಾಸ್ಕೋದಲ್ಲಿ ಕಸದ ಬುಟ್ಟಿಯೊಂದು ವ್ಯಕ್ತಿಯ ಪ್ರಾಣಕ್ಕೇ ಸಂಚಕಾರ ತಂದುಬಿಟ್ಟಿತ್ತು. ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗ್ತಾ ಇದ್ದ. ಆತನಿಗೆ ಅಪಾಯದ ಸುಳಿವು ಕೂಡ ಇರಲಿಲ್ಲ. ಭಾರೀ ಗಾಳಿಯ ಹೊಡೆತಕ್ಕೆ ಕಸ ತುಂಬುವ ಕಬ್ಬಿಣದ ಬುಟ್ಟಿ ಪೇಪರ್ ನಂತೆ ಮೇಲಕ್ಕೆ ಹಾರಿದೆ.

ರಭಸವಾಗಿ ಹಾರಿ ಬಂದು ಆ ವ್ಯಕ್ತಿಯ ಮೈಮೇಲೆ ಬಿದ್ದಿದೆ. ಸ್ವಲ್ಪ ದೂರಕ್ಕೆ ಆತನನ್ನು ಎಳೆದೊಯ್ದಿದೆ. ಒಂಚೂರು ಹೆಚ್ಚು ಕಡಿಮೆಯಾಗಿದ್ರೂ ಆತ ಕಸದ ಬುಟ್ಟಿ ಮಧ್ಯೆ ಸಿಕ್ಕು ನುಜ್ಜುಗುಜ್ಜಾಗಿ ಹೋಗ್ತಿದ್ದ. ಅದೃಷ್ಟವಶಾತ್ ಅವನಿಗೆ ಹೆಚ್ಚು ಗಾಯಗಳಾಗಿಲ್ಲ.

ವಿಚಿತ್ರವಾದ ಅವಘಡವನ್ನು ನೋಡಿ ಸುತ್ತಲೂ ಇದ್ದ ಜನರೆಲ್ಲ ಓಡೋಡಿ ಬಂದ್ರು. ಕಸದ ಬುಟ್ಟಿಯೊಳಕ್ಕೆ ಸಿಕ್ಕಿದ್ದ ವ್ಯಕ್ತಿಯ ಆರೋಗ್ಯ ವಿಚಾರಿಸಿಕೊಂಡ್ರು. ಈ ಘಟನೆಯ ನಂತರ ಕೂಡ ಕಸದ ಬುಟ್ಟಿ ಗಾಳಿಯ ಹೊಡೆತಕ್ಕೆ ಮುಂದಕ್ಕೆ ಚಲಿಸುತ್ತಲೇ ಇತ್ತು. ಕಳೆದ ಸೋಮವಾರದಿಂದ್ಲೂ ಮಾಸ್ಕೋದಲ್ಲಿ ಭಯಂಕರ ಬಿರುಗಾಳಿ ಬೀಸುತ್ತಿದೆ. 100 ವರ್ಷಗಳಲ್ಲಿ ಕಂಡು ಕೇಳರಿಯದಂತಹ ಬಿರುಗಾಳಿ ಇದಾಗಿದ್ದು, 16 ಮಂದಿ ಮೃತಪಟ್ಟಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...