alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ಲೋರಿಡಾದಲ್ಲಿ ಹಾವು ಹಿಡಿಯುತ್ತಿದ್ದಾರೆ ಭಾರತೀಯರು

snake-1

ಫ್ಲೋರಿಡಾ ವನ್ಯಜೀವಿ ವಿಭಾಗ ಹಾವು ಹಿಡಿಯಲು ಇಬ್ಬರು ಭಾರತೀಯರನ್ನು ನೇಮಕ ಮಾಡಿದೆ. ತಮಿಳುನಾಡು ಮೂಲದ  ಇಬ್ಬರು ಫೆಬ್ರವರಿಯವರೆಗೆ ಫ್ಲೋರಿಡಾದಲ್ಲಿ ಕೆಲಸ ಮಾಡಲಿದ್ದಾರೆ. ಫ್ಲೋರಿಡಾ ವನ್ಯಜೀವಿ ವಿಭಾಗ ಇವರಿಗೆ 46 ಲಕ್ಷ ರೂಪಾಯಿ ನೀಡಲಿದೆ.

ಫ್ಲೋರಿಡಾದಲ್ಲಿ ಕೆಲ ಹಾವುಗಳ ಸಂತತಿ ನಶಿಸುತ್ತಿದ್ದೆ. ಅಳಿವಿನಂಚಿನಲ್ಲಿರುವ ಹಾವುಗಳನ್ನು ಉಳಿಸಲು ಫ್ಲೋರಿಡಾ ವನ್ಯಜೀವಿ ವಿಭಾಗ ಶ್ರಮಿಸ್ತಾ ಇದೆ. ಅರಣ್ಯದಲ್ಲಿರುವ ಹಾವುಗಳನ್ನು ಹಿಡಿದು ಸಂತಾನ ವೃದ್ಧಿ ಮಾಡಲು ಮುಂದಾಗಿದೆ. ಹಾವು ಹಿಡಿಯಲು ನೇಮಕವಾಗಿರುವ ಇಬ್ಬರು ತಮಿಳುನಾಡಿನ ಇರುಲಾ ಜನಾಂಗದವರಾಗಿದ್ದಾರೆ. ಸುಮಾರು 50 ವರ್ಷ ವಯಸ್ಸಿನ ಇಬ್ಬರು ಭಾರತದ ಯಶಸ್ವಿ ಹಾವಾಡಿಗರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಇವ್ರ ಜೊತೆಗೆ ಇಬ್ಬರು ಅನುವಾದಕರನ್ನೂ ಜನವರಿಯಲ್ಲಿ ಫ್ಲೋರಿಡಾಗೆ ಕರೆಸಿಕೊಳ್ಳಲಾಗಿದೆ. ಈ ಇಬ್ಬರು 8 ದಿನಗಳಲ್ಲಿ 16 ಅಡಿ ಉದ್ದದ ಹೆಣ್ಣು ಹೆಬ್ಬಾವು ಹಾಗೂ 13 ಹಾವುಗಳನ್ನು ಹಿಡಿದು ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗಕ್ಕೊಪ್ಪಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...