alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಚ್ಚುಗೆಗೆ ಪಾತ್ರವಾಗಿದೆ ಭಾರತೀಯ ಶಿಕ್ಷಕಿಯ ಕಾರ್ಯ

ಫ್ಲೋರಿಡಾ ಹೈಸ್ಕೂಲ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ಗಣಿತ ಶಿಕ್ಷಕಿ ಹಲವು ವಿದ್ಯಾರ್ಥಿಗಳನ್ನು ರಕ್ಷಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗುಂಡಿನ ದಾಳಿ ನಡೆದಾಗ ಶಾಂತಿ ವಿಶ್ವನಾಥನ್ ಪಾಠ ಮಾಡುತ್ತಿದ್ರು.

ಗುಂಡು ಹಾರಿಸಿದ ಸದ್ದು ಕೇಳ್ತಿದ್ದಂತೆ ಅಲರ್ಟ್ ಆದ ಶಿಕ್ಷಕಿ ತರಗತಿಯ ಬಾಗಿಲು ಕಿಟಿಕಿಗಳನ್ನೆಲ್ಲ ಸಂಪೂರ್ಣ ಬಂದ್ ಮಾಡಿದ್ರು. ಮಕ್ಕಳಿಗೆಲ್ಲ ನೆಲದ ಮೇಲೆ ಮಲಗಿಕೊಳ್ಳುವಂತೆ ಸೂಚಿಸಿದ್ರು. ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಗಳಿದ್ದಾರೆ ಅನ್ನೋ ಅನುಮಾನ ಕೂಡ ಹಂತಕನಿಗೆ ಬರದಂತೆ ನೋಡಿಕೊಂಡ್ರು.

ಹಾಗಾಗಿ ಗಣಿತ ಪಾಠ ಕೇಳುತ್ತಿದ್ದ ವಿದ್ಯಾರ್ಥಿಗಳೆಲ್ಲ ಬದುಕಿ ಉಳಿದಿದ್ದಾರೆ. ನಂತರ ಪೊಲೀಸರು ಬಂದು ಬಾಗಿಲು ತೆರೆಯುವಂತೆ ಸೂಚಿಸಿದಾಗ್ಲೂ ಶಾಂತಿ ಡೋರ್ ಓಪನ್ ಮಾಡಲಿಲ್ಲ. ಅದು ಹಂತಕನ ಟ್ರಿಕ್ ಆಗಿರಬಹುದು ಅನ್ನೋ ಅನುಮಾನ ಅವರಿಗಿತ್ತು.

ಹಾಗಾಗಿ ಬಾಗಿಲು ತಟ್ಟಿದವರು ಪೊಲೀಸರೇ ಆಗಿದ್ದಲ್ಲಿ, ಕೀ ಬಳಸಿ ಡೋರ್ ಓಪನ್ ಮಾಡಿ ಅಂತಾ ಶಾಂತಿ ಖಡಕ್ಕಾಗಿ ಹೇಳಿದ್ದರು. ನಂತರ ಹಂತಕನಲ್ಲ, ಬಂದಿರೋದು ಪೊಲೀಸರು ಅಂತಾ ಖಚಿತವಾದ ಮೇಲೆ ಶಾಂತಿ ಬಾಗಿಲು ತೆರೆದಿದ್ದಾರೆ. ಶಿಕ್ಷಕಿಯ ಸಮಯಪ್ರಜ್ಞೆಯನ್ನು ವಿದ್ಯಾರ್ಥಿಗಳ ಪೋಷಕರು ಶ್ಲಾಘಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...