alex Certify
ಕನ್ನಡ ದುನಿಯಾ       Mobile App
       

Kannada Duniya

ಊಟಕ್ಕೆ ಹೋದವರು ಆಸ್ಪತ್ರೆ ಸೇರುವಂತಾಯ್ತು…!

ಚೀನಾದ ಶಿಜಯಾಜ್ವಾಂಗ್ ಎಂಬಲ್ಲಿ ರೆಸ್ಟೋರೆಂಟ್ ಒಂದಕ್ಕೆ ಡಿನ್ನರ್ ಗೆಂದು ಹೋಗಿದ್ದವರು ಆಸ್ಪತ್ರೆ ಸೇರಿದ ವಿಚಿತ್ರ ಘಟನೆ ನಡೆದಿದೆ. ಮಹಡಿ ಕುಸಿದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಆರು ಜನರು ಗಾಯಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದೆ.

ಮಹಡಿ ಮೇಲಿದ್ದ ರೆಸ್ಟೋರೆಂಟ್ ಒಂದರ ನಡು ಭಾಗದ ಮಹಡಿ ಕುಸಿದಿದ್ದರಿಂದ ಆರು ಮಂದಿ ಆಯತಪ್ಪಿ ಕೆಳ ಮಹಡಿಗೆ ಬಿದ್ದಿದ್ದಾರೆ. ಈ ಪೈಕಿ ಮೂವರಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಅದೃಷ್ಟವಶಾತ್ ರೆಸ್ಟೋರೆಂಟ್ ಮಾಲೀಕರು ಊಟದ ಬಿಲ್ ಕೇಳದೆ ಗಾಯಗೊಂಡವರ ಆಸ್ಪತ್ರೆ ಖರ್ಚನ್ನು ನೋಡಿಕೊಂಡಿದ್ದಾರೆ. ಕುಸಿದ ಮಹಡಿಯನ್ನ ಈಗ ದುರಸ್ಥಿ ಮಾಡಲಾಗಿದೆಯಂತೆ.

ಮಾರ್ಚ್ನಲ್ಲಿ ಕೂಡ ಚೀನಾ ವಿಮಾನ ನಿಲ್ದಾಣದ ಪ್ರವೇಶ ದ್ವಾರ ಪ್ರತಿಕೂಲ ಹವಾಮಾನದಿಂದಾಗಿ ಕುಸಿದು ಬಿದ್ದಿದ್ದ ಘಟನೆ ನಡೆದಿತ್ತು. ಇದರಿಂದ ವಿಮಾನ ಪ್ರಯಾಣಿಕರು ಕೆಲ ಕಾಲ ಆತಂಕಕ್ಕೆ ಒಳಗಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...