alex Certify
ಕನ್ನಡ ದುನಿಯಾ       Mobile App
       

Kannada Duniya

ಆಹಾ…! ರೈಲು ನಿಲ್ದಾಣ ಈಜುಕೊಳವಾದ್ರೆ ಎಂತಾ ಮಸ್ತಿ ಅಂತೀರಿ..!!

ಸ್ವೀಡನ್ ನಲ್ಲಿ ನಡೆದಿರುವ ಘಟನೆ ನಿಜಕ್ಕೂ ನಿಮ್ಮನ್ನ ನಗೆಗಡಲಿಗೆ ದೂಡುತ್ತದೆ. ಸ್ವೀಡನ್ ಜನರ ಹಾಸ್ಯ ಪ್ರಜ್ಞೆ ಇದೀಗ ಸಾಮಾಜಿಕ ಜಾಲತಾಣದಲ್ಲೂ ನಗೆ ಬುಗ್ಗೆಯನ್ನ ಉಕ್ಕಿಸಿದೆ. ಭಾರೀ ಮಳೆಯಿಂದಾಗಿ ಸ್ವೀಡನ್ ನಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿ ರೈಲು ನಿಲ್ದಾಣವೂ ಜಲಾವೃತವಾಗಿಬಿಟ್ಟಿತ್ತು.

ಮಂಡಿಯವರೆಗೂ ನೀರು ನಿಂತಿದ್ದರಿಂದ ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಯಿತು. ಆದರೇನಂತೆ ಜನರಿಗೆ ರೈಲು ನಿಲ್ದಾಣದಲ್ಲಿ ನೀರು ನಿಂತಿದೆ ಅನ್ನೋದೇ ಸಂಭ್ರಮದ ವಿಚಾರವಾಗಿ ಬಿಟ್ಟಿತ್ತು. ರೈಲು ನಿಲ್ದಾಣವನ್ನ ಈಜುಕೊಳ ಅಂದುಕೊಂಡ ಸ್ವೀಡನ್ ನ ಮಂದಿ ಆ ಸನ್ನಿವೇಶವನ್ನ ಎಂಜಾಯ್ ಮಾಡೋದಕ್ಕೆ ಶುರುಮಾಡಿದ್ರು.

ಸ್ವಿಮ್ಮಿಂಗ್ ಆಕ್ಸಸರೀಸ್ಗಳನ್ನ ರೈಲು ನಿಲ್ದಾಣಕ್ಕೆ ತಂದು ನೀರಿನಲ್ಲಿ ಆಟವಾಡೋದಕ್ಕೆ ನಿಂತರು. ಭದ್ರತಾ ಸಿಬ್ಬಂದಿಗಳು ಈ ಘಟನೆಯನ್ನು ನೋಡಿ ಜನರ ಖುಷಿಗೆ ಬ್ರೇಕ್ ಹಾಕೋದು ಬೇಡ ಅಂತ ಸುಮ್ಮನಾಗಿಬಿಟ್ಟರು. ಸ್ವೀಡನ್ನಲ್ಲಿ ಜನರು ರೈಲು ನಿಲ್ದಾಣವನ್ನು ಈಜುಕೊಳವನ್ನಾಗಿ ಪರಿವರ್ತಿಸಿ ಹೇಗೆಲ್ಲಾ ಮಸ್ತಿ ಮಾಡ್ತಿದ್ದಾರೆ ಅನ್ನೋ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ನಗೆ ಬಗ್ಗೆಯನ್ನ ಚಿಮ್ಮಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...