alex Certify
ಕನ್ನಡ ದುನಿಯಾ       Mobile App
       

Kannada Duniya

ಗಿಡುಗಕ್ಕಾಗಿ ವಿಮಾನದ 80 ಸೀಟ್ ಬುಕ್ ಮಾಡಿದ!!

588f96c5713ba157008b57a7-720

ಸೌದಿ ಅರೇಬಿಯಾದ ರಾಜಕುಮಾರನೊಬ್ಬ 80 ಗಿಡುಗಗಳಿಗಾಗಿ ವಿಮಾನ ಬುಕ್ ಮಾಡಿದ್ದಾನೆ. ವಿಮಾನದೊಳಗೆ ಕುಳಿತಿರುವ ಗಿಡುಗಗಳ ಫೋಟೋವನ್ನು ಪೈಲೆಟ್ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ.

ವಿಮಾನದ ಮಧ್ಯ ಭಾಗದಲ್ಲಿ ಗಿಡುಗಗಳು ಕುಳಿತಿವೆ. ಆದ್ರೆ ಈ ಪೋಟೋ ಯಾವ ವಿಮಾನದಲ್ಲಿ ತೆಗೆಯಲಾಗಿದೆ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಪೈಲೆಟ್ ತನ್ನ ಇನ್ಸ್ಟ್ರಾಗ್ರಾಮ್ ನಲ್ಲಿ ಈ ಫೊಟೋ ಹಾಕಿದ್ದು,ಈಗ ಸಾಮಾಜಿಕ ಜಾಲತಾಣದಲ್ಲಿ ಇದು ಸುದ್ದಿ ಮಾಡ್ತಾ ಇದೆ.

ಗಲ್ಫ್ ದೇಶಗಳಲ್ಲಿ ಇದು ಸಾಮಾನ್ಯ. ಅಲ್ಲಿ ಪ್ರಾಣಿಗಳನ್ನು ಮನುಷ್ಯರಂತೆ ನೋಡಿಕೊಳ್ತಾರೆ. ಗಿಡುಗ ಯುಎಇಯ ರಾಷ್ಟ್ರೀಯ ಪಕ್ಷಿ. ಹಾಗಾಗಿ ವಿಮಾನದಲ್ಲಿ ಪ್ರಯಾಣ ಮಾಡುವ ವ್ಯಕ್ತಿ ಗಿಡುಗದೊಂದಿಗೆ ಬಂದ್ರೆ ಯಾರು ವಿರೋಧ ವ್ಯಕ್ತಪಡಿಸುವುದಿಲ್ಲ. ಯುಎಇಯಲ್ಲಿ ಗಿಡುಗಕ್ಕೆ ಪಾಸ್ ಪೋರ್ಟ್ ಕೂಡ ಮಾಡಿಕೊಡಲಾಗುತ್ತದೆ. ಬಹ್ರೇನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ, ಪಾಕಿಸ್ತಾನ, ಮೊರಾಕೊ ಮತ್ತು ಸಿರಿಯಾಗಳಿಗೆ ಗಿಡುಗದ ಜೊತೆ ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದೆ. ಪಾಸ್ ಪೋರ್ಟ್ 3 ವರ್ಷ ವ್ಯಾಲಿಡಿಟಿ ಹೊಂದಿರುತ್ತದೆ.

ಇಷ್ಟೇ ಅಲ್ಲ ಕೆಲವೊಬ್ಬರು ಗಿಡುಗದ ಜೊತೆ ಹೊಟೇಲ್ ಗಳಿಗೆ ಬರ್ತಾರೆ. ಅಲ್ಲಿ ಗಿಡುಗಕ್ಕೂ ಆಹಾರದ ವ್ಯವಸ್ಥೆ ಮಾಡಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...