alex Certify
ಕನ್ನಡ ದುನಿಯಾ       Mobile App
       

Kannada Duniya

ರನ್ ವೇ ಬದಲು ರಸ್ತೆಯಲ್ಲೇ ಇಳಿದ ವಿಮಾನ..!

plane road

ವಿಮಾನಗಳು ಸಾಮಾನ್ಯವಾಗಿ ನಿಲ್ದಾಣದ ರನ್ ವೇ ನಲ್ಲಿ ಇಳಿಯುತ್ತವೆ. ಆದರೆ, ವಾಹನದಟ್ಟಣೆ ಇರುವ ರಸ್ತೆಯಲ್ಲಿ ಇಳಿದರೇ ಹೇಗಿರಬೇಡ, ಸಹಜವಾಗಿಯೇ ಆತಂಕ ಮೂಡುತ್ತದೆ. ಇಲ್ಲೂ ಅದೇ ಆಗಿದೆ. ಹೆದ್ದಾರಿಯಲ್ಲಿ ಇದ್ದಕ್ಕಿದ್ದಂತೆ ವಿಮಾನ ಇಳಿದಿದ್ದನ್ನು ಕಂಡವರೆಲ್ಲಾ ಗಾಬರಿಯಾಗಿದ್ದಾರೆ.

ಹಾರಾಡುತ್ತಿದ್ದ ವಿಮಾನ ರಸ್ತೆಯಲ್ಲೇ ಇಳಿದ ಘಟನೆ ರಷ್ಯಾದ ಮಾಸ್ಕೋದಲ್ಲಿ ನಡೆದಿದೆ. ವಿಮಾನದಲ್ಲಿ ಇಂಧನ ಖಾಲಿಯಾಗಿದ್ದಕ್ಕೆ ಪೈಲಟ್ ಏನು ಮಾಡಬೇಕೆಂದು ತಿಳಿಯದೇ ರಸ್ತೆಯಲ್ಲೇ ವಿಮಾನ ಇಳಿಸಿದ್ದಾನೆ ಎಂದು ಹೇಳಲಾಗಿದೆ. ಮಾಸ್ಕೋದಿಂದ ಸುಮಾರು 55 ಕಿಲೋಮೀಟರ್ ದೂರದ ಎತ್ತರ ಪ್ರದೇಶದಲ್ಲಿ ಹಾರಾಡುತ್ತಿದ್ದ ವಿಮಾನದಲ್ಲಿ ಇಂಧನ ಖಾಲಿಯಾಗಿದ್ದು, ಪೈಲಟ್ ರಸ್ತೆ ಮೇಲೆಯೇ ಲ್ಯಾಂಡಿಂಗ್ ಮಾಡಿದ್ದಾನೆ. ಇದು ಸಿಂಗಲ್ ಸೀಟಿನ ವಿಮಾನವಾಗಿದ್ದು, ಯಾರಿಗೂ ಏನೂ ಅಪಾಯವಾಗಿಲ್ಲ.

ರಸ್ತೆ ಮಧ್ಯದಲ್ಲೇ ವಿಮಾನ ಇಳಿಸಲು ತಾಂತ್ರಿಕ ತೊಂದರೆಯೇ ಕಾರಣ ಎಂದು ಪೈಲಟ್ ಹೇಳಿದ್ದನೆನ್ನಲಾಗಿದ್ದು, ತಾಂತ್ರಿಕ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ವಿಮಾನ ಹಾರಾಟ ಆರಂಭಿಸುವ ಮೊದಲು ಇಂಧನ ತುಂಬಿಸದ ಕಾರಣ ಈ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗಿದೆ

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...