alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದ ರೆಕ್ಕೆ ಮೇಲಿಂದ ಕೆಳಗಿಳಿದ್ರು ಪ್ರಯಾಣಿಕರು…!

ಪ್ರಯಾಣ ಮಾಡಬೇಕಾದರೆ ಅದೃಷ್ಟ ಚೆನ್ನಾಗಿಲ್ಲದಿದ್ದರೆ ಏನು ಬೇಕಾದರೂ ಆಗಬಹುದು. ಅದರಲ್ಲೂ ವಿಮಾನದಲ್ಲಿ ಹೋಗಬೇಕಾದರೆ ಜೀವ ಕೈಯ್ಯಲ್ಲಿ ಹಿಡಿದು ಹೋಗಬೇಕಾಗುತ್ತೆ. ಅಮೆರಿಕದಲ್ಲಿ 146 ಜನ ಪ್ರಯಾಣಿಕರು ಸ್ವಲ್ಪದರಲ್ಲೇ ಬಚಾವಾಗಿ ಬಂದಿದ್ದಾರೆ.

ಡೆಲ್ಟಾ ಏರ್ ಲೈನ್ಸ್ ನ ವಿಮಾನವೊಂದು ಮೂರು ಗಂಟೆ ತಡವಾಗಿ ಡೆಟ್ರಾಯ್ಟ್ ನಿಂದ ಡೆನ್ವರ್ ಗೆ ಬಂದಿಳಿದಿತ್ತು. ಆದರೆ ಅದರಲ್ಲಿದ್ದ ಪ್ರಯಾಣಿಕರು ಸ್ವಲ್ಪದರಲ್ಲೇ ಬಚಾವಾಗಿ ಬಂದಿದ್ದಾರೆ.

ಹೌದು….ಈ ವಿಮಾನದಲ್ಲಿ ಹೈಡ್ರಾಲಿಕ್ ಆಯಿಲ್ ಲೀಕ್ ಆಗಿ ಕ್ಯಾಬೀನ್ ತುಂಬಾ ಹೊಗೆ ಉಂಟಾಗಿತ್ತು. ಈ ಹೊಗೆಯನ್ನು ಉಸಿರಾಡಿದ ಕೆಲವರಿಗೆ ಆರೋಗ್ಯದಲ್ಲಿ ಸಮಸ್ಯೆ ಕೂಡ ಉಂಟಾಗಿತ್ತು.

ವಿಮಾನ ಸುರಕ್ಷಿತವಾಗಿ ಕೆಳಗಿಳಿಯುತ್ತಿದ್ದಂತೆ ಪ್ರಯಾಣಿಕರು ತುರ್ತು ನಿರ್ಗಮನ ಬಾಗಿಲು ತೆರೆದು ಹೊರಗಿಳಿದಿದ್ದಾರೆ. ಇನ್ನೂ ಕೆಲವರು ವಿಮಾನದ ರೆಕ್ಕೆ ಮೂಲಕವೂ ಕೆಳಗಿಳಿದಿದ್ದಾರೆ. ಅಂತೂ 146 ಮಂದಿ ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೇ ಪಾರಾಗಿ ಬಂದಿಳಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...