alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಸ್ಪೋರ್ಟ್ ಅದಲು ಬದಲಾದ್ರೂ ಗಮನಿಸಲೇ ಇಲ್ಲ ಅಧಿಕಾರಿಗಳು

ವ್ಯಕ್ತಿಯೊಬ್ಬ ಪ್ರಿಯತಮೆಯ ಪಾಸ್ಪೋರ್ಟ್ ಇಟ್ಟುಕೊಂಡು ಲಂಡನ್ ನಿಂದ ಜರ್ಮನಿಗೆ ಪ್ರಯಾಣಿಸಿದ್ದಾನೆ. ಪಾಸ್ಪೋರ್ಟ್ ನಲ್ಲಿರೋ ಯುವತಿಗೂ ಈ ವ್ಯಕ್ತಿಗೂ ವ್ಯತ್ಯಾಸವಿದೆ ಅನ್ನೋದನ್ನು ವಿಮಾನ ನಿಲ್ದಾಣ ಸಿಬ್ಬಂದಿ ಪತ್ತೆಹಚ್ಚಿಲ್ಲ.

ಮೈಖೆಲ್ ರಾಂಡಾಲ್, ‘ಮೆಕ್ ಲಾರೆನ್ ಫಾರ್ಮುಲಾ1’ ತಂಡದ ಟೆಕ್ನಿಶಿಯನ್. ತನ್ನ ಗೆಳತಿಯ ಪಾಸ್ಪೋರ್ಟ್ ತಂದಿದ್ದ ಮೈಖೆಲ್, ಗ್ಯಾಟ್ವಿಕ್ ವಿಮಾನ ನಿಲ್ದಾಣದಲ್ಲಿ ಚೆಕ್ ಇನ್ ಮಾಡಿದ್ದಾನೆ. ಅಲ್ಲಿಂದ ಬರ್ಲಿನ್ ಗೆ ಹಾರಿದ್ದಾನೆ. ಆತನ ಬಳಿಯಿದ್ದ ಪಾಸ್ಪೋರ್ಟ್ ಅವನದ್ದಲ್ಲ ಅನ್ನೋದು ಏರ್ಪೋರ್ಟ್ ಅಧಿಕಾರಿಗಳ ಗಮನಕ್ಕೇ ಬಂದಿರಲಿಲ್ಲ.

ಅಸಲಿಗೆ ಮೈಖೆಲ್ ಅಧಿಕಾರಿಗಳನ್ನು ವಂಚಿಸುವ ಉದ್ದೇಶ ಹೊಂದಿರಲಿಲ್ಲ. ಬೆಳಗ್ಗೆ ಮನೆಯಿಂದ ಹೊರಟಾಗ ಆಕಸ್ಮಿಕವಾಗಿ ತನ್ನ ಪಾಸ್ಪೋರ್ಟ್ ಬದಲು ಪ್ರಿಯತಮೆಯ ಪಾಸ್ಪೋರ್ಟ್ ತಂದು ಬಿಟ್ಟಿದ್ದ. ಬರ್ಲಿನ್ ತಲುಪಿದ ಮೇಲೆ ಅಲ್ಲಿನ ಅಧಿಕಾರಿಗಳು ಪಾಸ್ಪೋರ್ಟ್ ಬದಲಾಗಿರೋದನ್ನು ಗಮನಿಸಿದ್ದಾರೆ.

90 ನಿಮಿಷ ಮೈಖೆಲ್ ನನ್ನು ವಿಚಾರಣೆ ನಡೆಸಿ ಒಂದು ದಿನದ ವೀಸಾ ನೀಡಿ ಬಿಟ್ಟು ಕಳಿಸಿದ್ದಾರೆ. ಆದ್ರೆ ಲಂಡನ್ ನಲ್ಲಿ ಅಧಿಕಾರಿಗಳು ಪಾಸ್ಪೋರ್ಟ್ ನಲ್ಲಿದ್ದ ಫೋಟೋ ಮತ್ತು ಹೆಸರನ್ನು ಕೂಡ ಗಮನಿಸದೇ ಇರೋದು ತೀವ್ರ ಟೀಕೆಗೆ ಗುರಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...