alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕರ ಮಗುವಿಗೆ ಎದೆಹಾಲು ಕುಡಿಸಿದ ಗಗನಸಖಿ

ಅಳುವ ಮಗುವಿಗೆ ಅದರ ತಾಯಿ ಹಾಲುಣಿಸುವುದು ಸಹಜ. ಆದರೆ ಇಲ್ಲೊಬ್ಬರು ಗಗನಸಖಿ ಪ್ರಯಾಣಿಕರ ಮಗುವಿಗೆ ಎದೆಹಾಲು ಕುಡಿಸಿ ಅಚ್ಚರಿ ಮೂಡಿಸುವ ಜೊತೆಗೆ ಅಪಾರ ಮೆಚ್ಚುಗೆಗೂ ಪಾತ್ರವಾಗಿದ್ದಾರೆ.

ಫಿಲಿಪೈನ್ಸ್ ನ ಡೊಮೆಸ್ಟಿಕ್ ಫ್ಲೈಟ್‍ನಲ್ಲಿ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಆ ವಿಷಯವನ್ನು ಸ್ವತಃ ಗಗನಸಖಿಯೇ ತನ್ನ ಫೇಸ್‍ ಬುಕ್‍ ನಲ್ಲಿ ಹಂಚಿಕೊಂಡಿದ್ದರಿಂದ ಅದು ವೈರಲ್ ಆಗಿ, ಎಲ್ಲೆಡೆಯಿಂದ ಆಕೆಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ನಾನು ಕರ್ತವ್ಯದಲ್ಲಿದ್ದಾಗ ಮಗುವೊಂದು ಅಳುತ್ತಿರುವುದು ಕೇಳಿಸಿತು. ಅಗ ಅಳು ಕೇಳಿಸಿದಲ್ಲಿಗೆ ಹೋಗಿ ನೋಡಿದಾಗ, ಮಗುವಿಗೆ ಕುಡಿಸಲು ತಂದಿದ್ದ ಹಾಲು ಖಾಲಿಯಾಗಿದೆ ಎಂದು ಆ ತಾಯಿ ಹೇಳಿಕೊಂಡಿದ್ದರು. 9 ತಿಂಗಳ ಮಗುವಿನ ತಾಯಿಯಾಗಿರುವ ನಾನೇ ಆಗ ಆ ಮಗುವನ್ನು ಎತ್ತಿಕೊಂಡು ಅದು ಮಲಗುವವರೆಗೂ ನನ್ನ ಎದೆಹಾಲು ಕುಡಿಸಿದ್ದೇನೆ ಎಂಬುದಾಗಿ ಗಗನಸಖಿ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...