alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಗಿಂಗ್ ಜೊತೆ ಕಸ ಸ್ವಚ್ಛಗೊಳಿಸ್ತಿದ್ದಾರೆ ಜನ

ಭಾರತದಂತೆ ಸ್ವೀಡನ್ ನಲ್ಲಿ ಸ್ವಚ್ಛತಾ ಅಭಿಯಾನ ಶುರುವಾಗಿದೆ. ಪ್ಲಗಿಂಗ್ ಹೆಸರಿನಲ್ಲಿ ಈ ಅಭಿಯಾನ ಶುರುವಾಗಿದೆ. ಇಂಗ್ಲೀಷ್ ನ ಜಾಗಿಂಗ್ ಹಾಗೂ ಪಿಕಪ್ ಹೆಸರನ್ನು ಸೇರಿಸಿ ಪ್ಲಗಿಂಗ್ ಎಂದು ಹೆಸರಿಡಲಾಗಿದೆ. ಈ ಅಭಿಯಾನದಡಿ ಜಾಗಿಂಗ್ ಮಾಡುವ ಜನರು ದಾರಿಯಲ್ಲಿ ಬಿದ್ದ ಕಸವನ್ನು ಕ್ಲೀನ್ ಮಾಡಬೇಕಾಗುತ್ತದೆ.

ಜಾಗಿಂಗ್ ಗೆ ಹೊರಡುವ ಮೊದಲು ಕೈನಲ್ಲಿ ಪ್ಲಾಸ್ಟಿಕ್ ಕವರ್ ಹಿಡಿಯುವ ಜನರು ದಾರಿಯಲ್ಲಿ ಬಿದ್ದ ಕಸವನ್ನು ಕವರ್ ಗೆ ಹಾಕಿ ಪರಿಸರವನ್ನು ಸ್ವಚ್ಛಗೊಳಿಸುತ್ತ ಸಾಗುತ್ತಾರೆ. ಇದ್ರಿಂದ ಎರಡು ಲಾಭವಿದೆ. ನಗರ ಸ್ವಚ್ಛವಾಗಲಿದೆ. ಜೊತೆಗೆ ಹೆಚ್ಚಿನ ವ್ಯಾಯಾಮವಾಗಲಿದೆ.

ಪ್ಲಗಿಂಗ್ 2016ರಲ್ಲಿಯೇ ಶುರುವಾಗಿದೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಈ ಅಭಿಯಾನ ಹೆಚ್ಚು ಜನಪ್ರಿಯವಾಗ್ತಿದೆ. ಎರಡು ದಿನಗಳ ಹಿಂದೆ ಸ್ವೀಡನ್ ಜನ ಸಾಮಾಜಿಕ ಜಾಲತಾಣದಲ್ಲಿ ಪ್ಲಗಿಂಗ್ ನ ಕೆಲ ಫೋಟೋಗಳನ್ನು ಹಾಕಿದ್ದಾರೆ. ಪ್ಲಗಿಂಗ್ ನಿಂದಾಗಿ ರಾಜಧಾನಿ ಸ್ಟಾಕ್ಹೋಮ್ ಮೊದಲಿಗಿಂತ ಹೆಚ್ಚು ಸ್ವಚ್ಛವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...