alex Certify
ಕನ್ನಡ ದುನಿಯಾ       Mobile App
       

Kannada Duniya

ಮೀನಿಗಾಗಿ ಮೊಸಳೆ-ಮಾನವನ ಮಧ್ಯೆ ನಡೀತು ಫೈಟ್

crocodile-manಮೀನು ಹಿಡಿಯಲು ಸ್ನೇಹಿತರೊಂದಿಗೆ ತೆರಳಿದ್ದ ಮೀನುಗಾರನ ಬಲೆಗೆ ಮೀನೊಂದು ಬಿದ್ದಿದ್ದು, ಇದೇ ಮೀನನ್ನು ಮೊಸಳೆಯೂ ಕಚ್ಚಿಕೊಂಡಾಗ ಅದನ್ನು ಪಡೆಯಲು ಮೀನುಗಾರ, ಮೊಸಳೆಯನ್ನು ಬೆದರಿಸಿ ಓಡಿಸಲು ಸಫಲನಾಗಿದ್ದಾನೆ.

ಆಸ್ಟ್ರೇಲಿಯಾದ ಕೇಪ್ ಡಾನ್ ನಲ್ಲಿ ಈ ಘಟನೆ ನಡೆದಿದ್ದು, ಬೋಟ್ ನಲ್ಲಿ ತೆರಳಿದ್ದ ಮೀನುಗಾರನ ಬಲೆಗೆ ಮಧ್ಯಮ ಗಾತ್ರದ ಮೀನು ಬಿದ್ದಿದೆ. ಆದರೆ ಇದೇ ಮೀನನ್ನು ಹಿಂಬಾಲಿಸಿಕೊಂಡು ಬಂದಿದ್ದ ಮೊಸಳೆ ಅದನ್ನು ತನ್ನ ಹಲ್ಲುಗಳಿಂದ ಕಚ್ಚಿ ಹಿಡಿದಿದೆ.

ಬೋಟ್ ದಡಕ್ಕೆ ಬಂದರೂ ಮೊಸಳೆ ಮಾತ್ರ ಮೀನನ್ನು ಬಿಟ್ಟಿಲ್ಲ. ಮೀನುಗಾರ ಕೊನೆಗೆ ತನ್ನ ಬಳಿಯಿದ್ದ ಕೋಲಿನಿಂದ ಮೊಸಳೆಗೆ ಒಂದೆರೆಡು ಬಾರಿ ಹೊಡೆದಾಗ ವಿಧಿಯಿಲ್ಲದೆ ಮೀನನ್ನು ಬಿಟ್ಟು ಮತ್ತೆ ನೀರಿಗೆ ಹೋಗಿದೆ. ಮೊಸಳೆಯಿಂದ ಮೀನನ್ನು ಪಡೆದ ಸಂಭ್ರಮದಲ್ಲಿದ್ದ ಮೀನುಗಾರ, ಸ್ನೇಹಿತರೊಂದಿಗೆ ಮೀನಿನ ಮುಂದೆ ಫೋಟೋ ತೆಗೆಸಿಕೊಂಡು ಅದನ್ನು ಮತ್ತೆ ವಾಪಾಸ್ ನೀರಿಗೆ ಬಿಟ್ಟಿದ್ದಾನೆ.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...