alex Certify
ಕನ್ನಡ ದುನಿಯಾ       Mobile App
       

Kannada Duniya

ಸೌದಿಯಲ್ಲಿ ಶುರುವಾಯ್ತು ಫಸ್ಟ್ ವುಮೆನ್ ಕಾರ್ ಶೋ ರೂಂ

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ನಿಧಾನವಾಗಿ ಸ್ವಾತಂತ್ರ ಸಿಗ್ತಿದೆ. ಐದು ತಿಂಗಳ ಹಿಂದಷ್ಟೇ ಸೌದಿ ಸರ್ಕಾರ ಮಹಿಳೆಯರಿಗೆ ಚಾಲನಾ ಪರವಾನಿಗೆ ನೀಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇದಾದ ನಂತ್ರ ಇದೇ ಮೊದಲ ಬಾರಿ ಸೌದಿಯ ಖಾಸಗಿ ಕಂಪನಿಯೊಂದು ಮಹಿಳೆಯರಿಗಾಗಿಯೇ ಕಾರ್ ಶೋರೂಂ ತೆರೆದಿದೆ.

ಜೆಡ್ಡಾದ ಶಾಪಿಂಗ್ ಮಾಲ್ ನಲ್ಲಿ ಈ ಫಸ್ಟ್ ವುಮೆನ್ ಕಾರ್ ಶೋರೂಂ ತೆರೆಯಲಾಗಿದೆ. ಮಹಿಳೆಯರಿಗೆ ಕಾರು ಆಯ್ಕೆಗೆ ಸ್ವಾತಂತ್ರ ಸಿಗಲಿ ಎನ್ನುವ ಉದ್ದೇಶದಿಂದ ಮಹಿಳಾ ಕಾರ್ ಶೋರೂಂ ಶುರುವಾಗಿದೆ. ಇಲ್ಲಿ ಮಹಿಳೆಯರೇ ಸಿಬ್ಬಂದಿಯಾಗಿ ಕೆಲಸ ಮಾಡಲಿದ್ದಾರೆ.

ಶೋ ರೂಂನಲ್ಲಿ ವಿವಿಧ ಕಂಪನಿಯ ವಾಹನಗಳಿರಲಿವೆ. ಬ್ಯಾಂಕ್ ಹಾಗೂ ಹಣಕಾಸು ಕಂಪನಿ ಜೊತೆ ಮಾತುಕತೆ ನಡೆಸಿ ಮಹಿಳೆಯರಿಗೆ ಸಾಲ ಕೊಡಿಸುವ ವ್ಯವಸ್ಥೆಯನ್ನೂ ಈ ಕಂಪನಿ ಮಾಡಲಿದೆ. ಧಾರ್ಮಿಕ ಕಾರಣಗಳಿಂದಾಗಿ ಮೂರು ದಶಕಗಳಿಂದ ಸೌದಿ ಮಹಿಳೆಯರಿಗೆ ಚಾಲನಾ ಪರವಾನಿಗೆ ನೀಡಿರಲಿಲ್ಲ. ಹಿಂದಿನ ವರ್ಷ ಸೌದಿ ಮಹಿಳೆಯರಿಗೆ ಸರ್ಕಾರ ಖುಷಿ ಸುದ್ದಿ ನೀಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...