alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇಶದಲ್ಲಿ ಬದಲಾಯ್ತು ರೇಪ್ ಮಾಡಿದವರನ್ನೇ ಮದುವೆಯಾಗುವ ಪದ್ಧತಿ

ಸೋಮಾಲಿಲ್ಯಾಂಡ್ ಸ್ವಯಂ ಘೋಷಿತ ರಾಜ್ಯವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸೋಮಾಲಿಯಾ ಗುರುತಿಸಲ್ಪಟ್ಟಿದೆ. ಆದ್ರೆ ಸೋಮಾಲಿಲ್ಯಾಂಡ್ ಗೆ ದೇಶದ ಸ್ಥಾನ ಸಿಕ್ಕಿಲ್ಲ. ಇಲ್ಲಿ  ರೇಪ್ ಒಂದು ಅಪರಾಧವಾಗಿರಲಿಲ್ಲ. ಅತ್ಯಾಚಾರವನ್ನು ಸಾಂಸ್ಕೃತಿಕ ಸಮಸ್ಯೆ ಎನ್ನುವ ರೀತಿಯಲ್ಲಿ ನೋಡಲಾಗ್ತಿತ್ತು. ಅತ್ಯಾಚಾರವೆಸಗಿದ ವ್ಯಕ್ತಿಯೇ ಮಹಿಳೆಯನ್ನು ಮದುವೆಯಾಗಬೇಕಿತ್ತು.

ಆದ್ರೆ ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗುತ್ತ ಸಾಗಿದೆ. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಏರಿಕೆಯಾಗಿದೆ. ಮಹಿಳೆಯರಿಗೆ ರಕ್ಷಣೆ ನೀಡಲು ಹಾಗೂ ರೇಪ್ ತಡೆಯಲು ಈ ದೇಶದಲ್ಲಿ ಮೊದಲ ಬಾರಿ ರೇಪ್ ವಿರುದ್ಧ ಕಾನೂನೊಂದನ್ನು ಜಾರಿಗೊಳಿಸಲಾಗಿದೆ.

ಹೊಸ ಕಾನೂನಿನ ಪ್ರಕಾರ ಅತ್ಯಾಚಾರದ ಆರೋಪಿಗೆ 30 ವರ್ಷಗಳ ಜೈಲು ಶಿಕ್ಷೆಯಾಗಲಿದೆ. ಸೋಮಾಲಿಯಾದಿಂದ ಸೋಮಾಲಿಲ್ಯಾಂಡ್ 1991ರಲ್ಲಿಯೇ ಪ್ರತ್ಯೇಕವಾಗಿದೆ. ಆದ್ರೆ ಇದಕ್ಕೆ ಈವರೆಗೂ ದೇಶದ ಸ್ಥಾನ ಸಿಕ್ಕಿಲ್ಲ. ಸೋಮಾಲಿಯಾದಲ್ಲಿ ಕೂಡ ರೇಪ್ ವಿರುದ್ಧ ಈವರೆಗೂ ಯಾವುದೇ ಕಾನೂನಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...