alex Certify
ಕನ್ನಡ ದುನಿಯಾ       Mobile App
       

Kannada Duniya

40 ದಿನಗಳ ನಂತ್ರ ಇಲ್ಲಾಯ್ತು ಹೊಸ ವರ್ಷದ ಮೊದಲ ಸೂರ್ಯೋದಯ

2018 ಜನವರಿ ಒಂದನ್ನು ನಾವೆಲ್ಲ ಸಂಭ್ರಮದಿಂದ ಆಚರಿಸಿದ್ದೇವೆ. ಹೊಸ ವರ್ಷದ ಮೊದಲ ದಿನ ಸೂರ್ಯೋದಯ ನೋಡಿ ಆನಂದಿಸಿದವರಿದ್ದಾರೆ. ಆದ್ರೆ ಉತ್ತರ ರಷ್ಯಾದ ಆರ್ಕ್ಟಿಕ್ ಸರ್ಕಲ್ ನಿವಾಸಿಗಳಿಗೆ ಜನವರಿ 16ರಂದು ಹೊಸ ವರ್ಷದ ಮೊದಲ ಸೂರ್ಯೋದಯ ನೋಡಲು ಸಿಕ್ಕಿದೆ.

ಹೌದು, ಕಳೆದ 40 ದಿನಗಳಿಂದ ಈ ಪ್ರದೇಶ ಮಂಜಿನಿಂದಾಗಿ ಸಂಪೂರ್ಣ ಕತ್ತಲಾಗಿತ್ತಂತೆ. 40 ದಿನಗಳಿಂದ ಜನರು ಸೂರ್ಯನನ್ನು ನೋಡಿಯೇ ಇರಲಿಲ್ಲವಂತೆ. ಇದೊಂದು ವಿಚಿತ್ರ ಅನುಭವ ಎನ್ನುತ್ತಾರೆ ಜನರು. ಸತತ 40 ದಿನಗಳ ಕಾಲ ಕತ್ತಲಿನಲ್ಲಿದ್ದ ಜನರು ಮೊದಲ ಸೂರ್ಯೋದಯ ನೋಡಲು ಉತ್ಸುಕರಾಗಿದ್ದರು.

ಸನ್ನಿ ಮೌಂಟೇನ್ ಗೆ ಬಂದಿದ್ದ ಜನರಿಗೆ ಕೇವಲ 34 ನಿಮಿಷ ಮಾತ್ರ ಸೂರ್ಯನ ದರ್ಶನ ಪಡೆಯಲು ಸಾಧ್ಯವಾಯ್ತು. ಸೂರ್ಯೋದಯದ ಸುಂದರ ಕ್ಷಣಗಳನ್ನು ಕ್ಲಿಕ್ಕಿಸಿ ಅನೇಕರು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...